Asianet Suvarna News Asianet Suvarna News

ಕಾಶ್ಮೀರಕ್ಕೆ ಹಾರಿದ ಸ್ಯಾಂಡಲ್‌ವುಡ್ ಸೋಲ್ಜರ್ ಧ್ರುವ: ಇಂಡಿಯಾ ಪಾಕ್ ಬಾರ್ಡರ್‌ನಲ್ಲಿ ಧ್ರುವಗೇನು ಕೆಲಸ!

ಸ್ಯಾಂಡಲ್‌ವುಡ್‌ನ ಸೋಲ್ಡ್ಜರ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೊಂದು ಕಸರತ್ತು ಮಾರ್ಟಿನ್. ಈ ಸಿನಿಮಾದ ಮೇಲೆ ಧ್ರುವನ ಫ್ಯಾನ್ಸ್‌ಗೆ ಭಾರಿ ನಿರೀಕ್ಷೆ ಇಟ್ಟುಕೊಂಟಿದ್ದಾರೆ. ಮಾರ್ಟಿನ್ ಸ್ಯಾಂಪಲ್‌ಗಳು ಕೂಡ ದೊಡ್ಡ ಎಕ್ಸ್ಪಟೇಷನ್ ಇಟ್ಟುಕೊಳ್ಳೋ ಭರವಸೆ ಮೂಡಿಸಿವೆ.

ಸ್ಯಾಂಡಲ್‌ವುಡ್‌ನ ಸೋಲ್ಡ್ಜರ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೊಂದು ಕಸರತ್ತು ಮಾರ್ಟಿನ್. ಈ ಸಿನಿಮಾದ ಮೇಲೆ ಧ್ರುವನ ಫ್ಯಾನ್ಸ್‌ಗೆ ಭಾರಿ ನಿರೀಕ್ಷೆ ಇಟ್ಟುಕೊಂಟಿದ್ದಾರೆ. ಮಾರ್ಟಿನ್ ಸ್ಯಾಂಪಲ್‌ಗಳು ಕೂಡ ದೊಡ್ಡ ಎಕ್ಸ್ಪಟೇಷನ್ ಇಟ್ಟುಕೊಳ್ಳೋ ಭರವಸೆ ಮೂಡಿಸಿವೆ. ಹೀಗಾಗೆ ಬೆಳ್ಳಿತೆರೆ ಮೇಲೆ ಈ ಮಾರ್ಟಿನ್ ಮಾರ್ಧನಿಸೋದು ಯಾವಾಗ ನೋಡ್ತೀವಪ್ಪಾ ಅನ್ನೋ ಆಸೆ ಆಕ್ಷನ್ ಪ್ರಿನ್ಸ್ ಅಭಿಮಾನಿಗಳಲ್ಲಿದೆ. ಆದ್ರೆ ಧ್ರುವ ಈಗ ತಡಿರಿ ತಡಿರಿ ನಾನು ಇಂಡಿಯಾ ಪಾಕ್ ಬಾರ್ಡರ್ಗೆ ಹೋಗಿ ಬರ್ತೇನೆ ಅಂತ ಕಾಶ್ಮೀರಕ್ಕೆ ಹಾರಿದ್ದಾರೆ. ಪೊಗರು ಸಿನಿಮಾ ನಂತರ ಧ್ರುವ ಸರ್ಜಾ ‘ಮಾರ್ಟಿನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 

ನಿರ್ದೇಶಕ ಎ.ಪಿ ಅರ್ಜುನ್ ಜೊತೆ ಅದ್ದೂರಿ ನಂತ್ರ ಮಾರ್ಟಿನ್‌ಗಾಗಿ ಮತ್ತೆ ಒಂದಾಗಿರೋದು ಧ್ರುವ ವಿಐಪಿಗಳಲ್ಲಿ ಕಾತರ ಮತ್ತು ಸಿನಿಮಾ ನೋಡುವ ಆತುರ ಎರಡು ಜಾಸ್ತಿಯಾಗಿದೆ. ಅದ್ರೆ ಮಾರ್ಟಿನ್ ಶೂಟಿಂಗ್ ಮಾತ್ರ ಇನ್ನು ಮುಗಿದಿಲ್ಲ. 130ಕ್ಕೂ ಹೆಚ್ಚು ದಿನಗಳು ಶೂಟಿಂಗ್ ಮಾಡಿರುವ ಚಿತ್ರತಂಡ ಇನ್ನು ಕುಂಬಳಕಾಯಿ ಒಡೆದಿಲ್ಲ. ಇದೀಗ ಇಂಡಿಯಾ ಪಾಕಿಸ್ತಾನ ಗಡಿಯ ಕಾಶ್ಮೀರಕ್ಕೆ ತೆರಳಿರೋ ಧ್ರುವ ಸರ್ಜಾ ಟೀಂ ಕೊರೆವ ಚಳಿಯಲ್ಲಿ ಹಿಮದ ನಡುವಲ್ಲಿ ಮಾರ್ಟಿನ್ ಕೊನೆ ಕ್ಷಣದ ಶೂಟಿಂಗ್ ಮಾಡುತ್ತಿದ್ದಾರೆ. ‘ಮಾರ್ಟಿನ್’ ಚಿತ್ರತಂಡ ಈಗ ಕೊನೆಯ ಹಂತದ ಶೂಟಿಂಗ್‌ಗಾಗಿ ಇಂಡಿಯಾದ ಸ್ವಿಜರ್ಲೆಂಡ್ ಎನಿಸಿಕೊಂಡಿರೋ ಕಾಶ್ಮೀರಕ್ಕೆ ಹಾರಿದೆ. ಅರೆರೆ ಇದೇನು ಕಳೆದ ಮಾರ್ಚ್‌ನಲ್ಲೇ ಕಾಶ್ಮೀರದಲ್ಲಿ ಶೂಟಿಂಗ್ ಮಾಡಿದ್ರಲ್ಲ ಮತ್ತೆ ಯಾಕೆ ಮಾರ್ಟಿನ್ ಬಳಗ ಕಾಶ್ಮೀರಕ್ಕೆ ಹೋಗಿದ್ದಾರೆ ಅಂತೀರಾ. 

ಯಾಕಂದ್ರೆ ಧ್ರುವ ಮಾರ್ಟಿನ್ ಅವತಾರದಲ್ಲಿ ಪಾಕಿಸ್ತಾನದಿಂದ ಎಸ್ಕೇಪ್ ಅಗಿ ಬರೋ ಸನ್ನಿವೇಶವನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಸೀಕ್ವೆನ್ಸ್ ಚಿತ್ರೀಕರಣ ಒಂದು ವಾರ ನಡೆಯುತ್ತಂತೆ. ಮಾರ್ಟಿನ್ ಚಿತ್ರದಲ್ಲಿ ಅದ್ಧೂರಿ ಹುಡುಗ ಧ್ರುವ ಸರ್ಜಾ ಡ್ಯುಯೇಲ್ ರೋಲ್‌ನಲ್ಲಿ ಕಾಣಿಸಿದ್ದಾರೆ ಅನ್ನೋ ಮಾತಿದೆ. ಒಂದು ಗ್ಯಾಂಗ್ ಸ್ಟರ್ ಮಾರ್ಟಿನ್ ಅವತಾರವಾದ್ರೆ, ಮತ್ತೊಂದು ಸೋಲ್ಜರ್ ಗೆಟಪ್‌ನಲ್ಲಿ ಕಾಣಿಸುತ್ತಾರಂತೆ. ಒಂದು ವೇಳೆ ಧ್ರುವ ಡಬಲ್ ರೋಲ್‌ನಲ್ಲಿ ಕಾಣಿಸಿದ್ರೆ ಅವರ ವಿಐಪಿಗಳಿಗೆ  ಭರ್ಜರಿ ಬಾಡೂಟ ಫಿಕ್ಸ್. ಇನ್ನು ಕಾಶ್ಮೀರದಲ್ಲಿ ಬಾಕಿ ಇರೋ ಶೂಟಿಂಗ್ ಮುಗಿದ್ರೆ ಮಾರ್ಟಿನ್ ಚಿತ್ರದ ಶೂಟಿಂಗ್ ಬಹುತೇಕ‌ ಕಂಪ್ಲೀಟ್ ಆಗಲಿದ್ದು, ಉಳಿದಿರೋ ಇನ್ನೆರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಿ ಕುಂಬಳಕಾಯಿ ಒಡೆಯಲು ಚಿತ್ರತಂಡ ಪ್ಲಾನ್ ಮಾಡಿದೆ, ವರ್ಷ ಮಾರ್ಚ್ ಅಥವ ಏಪ್ರಿಲ್‌ನಲ್ಲಿ ಮಾರ್ಟಿನ್ ಬೆಳ್ಳಿತೆರೆ ಮೇಲೆ ವಿಜೃಂಭಿಸಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories