ಅಭಿರಾಮಚಂದ್ರನಿಗೆ ಶಿವಣ್ಣ ಸಾಥ್: ಕುತೂಹಲ ಮೂಡಿಸುತ್ತಿದೆ ಅಭಿರಾಮಚಂದ್ರ ಟೀಸರ್!
ಸ್ಯಾಂಡಲ್ವುಡ್‌ನಲ್ಲಿ ಅಭಿರಾಮಚಂದ್ರ ಸೌಂಡ್ ಮಾಡುತ್ತಿದ್ದಾನೆ. ಟೀಸರ್ ಮೂಲಕ ಬಿಗ್ ಸ್ಕ್ರೀನ್ ಮೇಲೆ ಹಾವಳಿ ಇಡುತ್ತೇನೆ ಅಂತ ಅಭಿರಾಮಚಂದ್ರ ಡೈರೆಕ್ಟ್ ಆಗೆ ಹೇಳುತ್ತಿದ್ದಾನೆ. ಈ ಅಭಿರಾಮ ಚಂದ್ರನಿಗೆ ಈಗ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.
ಸ್ಯಾಂಡಲ್ವುಡ್‌ನಲ್ಲಿ ಅಭಿರಾಮಚಂದ್ರ ಸೌಂಡ್ ಮಾಡುತ್ತಿದ್ದಾನೆ. ಟೀಸರ್ ಮೂಲಕ ಬಿಗ್ ಸ್ಕ್ರೀನ್ ಮೇಲೆ ಹಾವಳಿ ಇಡುತ್ತೇನೆ ಅಂತ ಅಭಿರಾಮಚಂದ್ರ ಡೈರೆಕ್ಟ್ ಆಗೆ ಹೇಳುತ್ತಿದ್ದಾನೆ. ಈ ಅಭಿರಾಮ ಚಂದ್ರನಿಗೆ ಈಗ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ಅಭಿರಾಮಚಂದ್ರ ಸಿನಿಮಾದ ಸ್ಪೆಷಲ್ ಟೀಸರ್‌ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದು, ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಈ ಹಿಂದೆ ಅಭಿರಾಮಚದ್ರ ಸಿನಿಮಾದ ಫಸ್ಟ್ ಲುಕ್ಅನ್ನ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ್ರು.
ಈ ಶಿವರಾಜ್ ಕುಮಾರ್ ಈ ಸಿನಿಮಾದ ಟೀಸರ್ ಮೆಚ್ಚಿದ್ದಾರೆ. ಅಭಿರಾಮಚಂದ್ರ ಸಿನಿಮಾದಲ್ಲಿ ರಥ ಕಿರಣ ನಾಯಕ ನಟನಾಗಿ ಸ್ಯಾಂಡಲ್‌ವುಡ್ ಅಂಗಳಕ್ಕೆ ಎಂಟ್ರಿ ಕೊಡ್ತಿದ್ದಾರೆ. ನಾಗೇಂದ್ರ ಗಾಣಿಗ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ 'ಅಭಿರಾಮಚಂದ್ರ' ಸಿನಿಮಾದಲ್ಲಿ ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೊನ ಪ್ರೇಮಕಥೆ ಇದೆ. ಸಿನಿಮಾದಲ್ಲಿ ಸಿದ್ದು ಮೂಲಿಮನಿ, ನಾಟ್ಯರಂಗ ಮುಖ್ಯ ಭೂಮಿಕೆಯಲ್ಲಿದ್ದು, ನಾಯಕಿಯಾಗಿ ಶಿವಾನಿ ರೈ ನಟಿಸಿದ್ದಾರೆ. ಸಧ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಲಿದೆ.