ಧಾರವಾಡದಲ್ಲೂ ಕೈಗೆ ಬಂಡಾಯದ ಬಿಸಿ? ವಿನಯ್ ಕುಲಕರ್ಣಿ ಪಕ್ಷೇತರರಾಗಿ ಕಣಕ್ಕೆ?
Mar 29, 2019, 7:25 PM IST
ಬಿಜೆಪಿ ಭದ್ರಕೋಟೆ ಧಾರಾವಾಡದಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಷಿಗೆ ಪ್ರಬಲ ಪ್ರತಿಸ್ಪರ್ಧಿಯಾಗಬಹುದೆಂದು ನಿರೀಕ್ಷಿಸಲಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಧಾರವಾಡ ಲೋಕಸಭಾ ಟಿಕೆಟ್ ’ಕೈ’ ತಪ್ಪಿದೆ. ಮಾಜಿ ಸಂಸದ ಐ.ಜಿ ಸನದಿ ಪುತ್ರ ಶಕೀರ್ ಸನದಿಗೆ ಧಾರವಾಡದ ಟಿಕೆಟ್ ಪಕ್ಕಾ ಆಗಿದೆ. ವಿನಯ್ ಕುಲಕರ್ಣಿಗೆ ಟಿಕೆಟ್ ಕೈ ತಪ್ಪಿದಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ.