Asianet Suvarna News Asianet Suvarna News

ಪ್ರತ್ಯೇಕ ಲಿಂಗಾಯತ ಧರ್ಮ: ಎಂ.ಬಿ. ಪಾಟೀಲ್ ಹೆಸರಿನ ನಕಲಿ ಪತ್ರ ವೈರಲ್!

Apr 16, 2019, 1:37 PM IST

ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಚುನಾವಣಾ ಪ್ರಚಾರ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ. ಈ ನಡುವೆ ಲಿಂಗಾಯತ ಮುಖಂಡ, ಗೃಹ ಸಚಿವ ಎಂ.ಬಿ. ಪಾಟೀಲ್ ಸೋನಿಯಾ ಗಾಂಧಿಗೆ ಬರೆದಿದ್ದರೆನ್ನಲಾದ ಪತ್ರವೊಂದು ವೈರಲ್ ಆಗಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ರಾಜಕೀಯ ಷಡ್ಯಂತ್ರದ ಭಾಗ ಎಂದು ಆ ಪತ್ರದಲ್ಲಿ ಹೇಳಲಾಗಿದೆ. ಆದರೆ ಆ ಪತ್ರ ನಕಲಿ, ತಮ್ಮ ಸಂಸ್ಥೆಯ ಹೆಸರು, ಸಹಿಯನ್ನು ದುರ್ಬಳಕೆ  ಮಾಡಲಾಗಿದ್ದು, ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.