BIG 3: ಕ್ಯಾರೇ ಅನ್ನದ ಶಾಸಕ, ಅಧಿಕಾರಿಗಳು: ಟೆಂಟ್‌ನಲ್ಲೇ ಶಾಲೆ: ಸಿಡಿದೆದ್ದ ಗ್ರಾಮಸ್ಥರು..!

*  ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದ ಸರ್ಕಾರಿ ಶಾಲೆ
*  ಶಿಥಿಲಾವಸ್ಥೆಗೆ ತಲುಪಿದ ಶಾಲಾ ಕಟ್ಟಡ 
*  ಮಂಗಗಳ ಕಾಟದಿಂದ ಹಾಳಾದ ಕೊಠಡಿಗಳ ಹೆಂಚುಗಳು  
 

First Published May 17, 2022, 12:51 PM IST | Last Updated May 17, 2022, 12:51 PM IST

ಬೆಳಗಾವಿ(ಮೇ.17): ಬೇಸಿಗೆ ರಜೆ ಬಳಿಕೆ ನಿನ್ನೆ(ಸೋಮವಾರ) ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿವೆ. ಆದರೆ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆಯಿಂದ ಶಾಲಾ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಒಂದು ಕೊಠಡಿಯ ಛಾವಣಿ ಮೂರು ವರ್ಷದ ಹಿಂದಯೇ ಕುಸಿದು ಬಿದ್ದಿದೆ. ಇನ್ನೊಂದು ಕೊಠಡಿಯ ಛಾವಣಿ ಇದೇ ಬೇಸಿಗೆಯಲ್ಲಿ ಹಾಳಾಗಿದೆ. ಮಂಗಗಳ ಕಾಟದಿಂದ ಮತ್ತಷ್ಟು ಕೊಠಡಿಗಳ ಹೆಂಚುಗಳು ಹಾಳಾಗಿವೆ. ಇನ್ನು ನಿನ್ನೆಯಿಂದ ಶಾಲೆಗಳು ಆರಂಭಗೊಂಡಿವೆ. ಹೀಗಾಗಿ ಮಕ್ಕಳ ಸುರಕ್ಷತೆ ದೃಷ್ಠಿಯತಿಂದ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮಕ್ಕಳ ಪೋಷಕರು ಸೇರಿ ಶಾಲಾ ಆವರಣದಲ್ಲೇ ಟೆಂಟ್‌ ಹಾಕಿದ್ದಾರೆ. ಹೀಗಾಗಿ ರಾಜಕಾರಣಿಗಳ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. 

ವಿದ್ಯಾರ್ಥಿಗಳ ಕೈಯಲ್ಲಿ ತ್ರಿಶೂಲ, ಬಂದೂಕು! ಈ ಶಸ್ತ್ರಾಸ್ತ್ರ ತರಬೇತಿ ಹಿಂದೆ ಇದೆಯಾ ದುರುದ್ದೇಶ..?

Video Top Stories