SSLC Exam: ಜನವರಿ ಪ್ರಾರಂಭವಾಗ್ತಿದ್ರೂ ಅನೌನ್ಸ್ ಆಗಿಲ್ಲ ಪರೀಕ್ಷಾ ದಿನಾಂಕ

ರಾಜ್ಯದಲ್ಲಿ ಒಮಿಕ್ರೋನ್ ಸೋಂಕು (Omicron Variant) ಹೆಚ್ಚಾಗುತ್ತಿದೆ. ಇದು ಮೂರನೇ ಅಲೆಗೆ ಕಾರಣವಾಗಬಹುದು, ಫೆಬ್ರವರಿಯಲ್ಲಿ ಉತ್ತುಂಗಕ್ಕೇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಮೇಲೆ ಪ್ರಭಾವ ಬೀರುವ ಸಾದ್ಯತೆ ಇದೆ. 

First Published Dec 29, 2021, 11:32 AM IST | Last Updated Dec 29, 2021, 11:32 AM IST

ಬೆಂಗಳೂರು (ಡಿ. 29): ರಾಜ್ಯದಲ್ಲಿ ಒಮಿಕ್ರೋನ್ ಸೋಂಕು (Omicron Variant) ಹೆಚ್ಚಾಗುತ್ತಿದೆ. ಇದು ಮೂರನೇ ಅಲೆಗೆ ಕಾರಣವಾಗಬಹುದು, ಫೆಬ್ರವರಿಯಲ್ಲಿ ಉತ್ತುಂಗಕ್ಕೇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಮೇಲೆ ಪ್ರಭಾವ ಬೀರುವ ಸಾದ್ಯತೆ ಇದೆ. 

News Hour: ರೂಪಾಂತರಿ ತಡೆಗೆ ನೈಟ್ ಕರ್ಫ್ಯೂ, ಏನೆಲ್ಲಾ ಹೊಸ ನಿಯಮ?

2021-22 ನೇ ಸಾಲಿನ ಪರೀಕ್ಷಾ ದಿನಾಂಕವನ್ನು ಶಿಕ್ಷಣ ಇಲಾಖೆ ಇನ್ನೂ ಪ್ರಕಟಿಸಿಲ್ಲ. ಕೊರೋನಾ ಕಾರಣದಿಂದ ಅರ್ಧವಾರ್ಷಿಕ ಪರೀಕ್ಷೆಯೂ ನಡೆದಿಲ್ಲ. ರಾಜ್ಯ ಪಠ್ಯಕ್ರಮದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಯಾವ ಪರೀಕ್ಷೆಯೂ ನಡೆದಿಲ್ಲ. ವಾರ್ಷಿಕ ಪರೀಕ್ಷೆಯನ್ನು ಆತುರ ಆತುರವಾಗಿ ಪ್ರಕಟಿಸಿದರೆ, ಮಕ್ಕಳಿಗೆ ತಯಾರಿ ಮಾಡಿಕೊಳ್ಳಲು ಸಮಯ ಸಿಗುವುದಿಲ್ಲ. ಈ ಬಗ್ಗೆ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಪರೀಕ್ಷಾ ದಿನಾಂಕವನ್ನು ಪ್ರಕಟಿಸಬೇಕು ಎಂದು ರುಪ್ಸಾ ಒತ್ತಾಯಿಸಿದೆ.