ರಾಜ್ಯ ಸರ್ಕಾರದ 'ಧ್ಯಾನ' ಪ್ರಯೋಗಕ್ಕೆ ರಾಜ್ಯಾದ್ಯಂತ ಆಕ್ಷೇಪ

ಶಾಲೆಯಲ್ಲಿ ಧ್ಯಾನ ವಿಚಾರಕ್ಕೆ ಇಡೀ ರಾಜ್ಯವೇ ವಿರೋಧ ವ್ಯಕ್ತಪಡಿಸುತ್ತಿದೆ. ಶಿಕ್ಷಣ ಸಚಿವರ ನಿರ್ಧಾರಕ್ಕೆ ನಾಡಿನ ಕೆಲ ಸಾಹಿತಿಗಳು, ಚಿಂತಕರು, ಲೇಖಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಕ್ಷೇಪಿಸಿ ನಾಡಿನ ವಿವಿಧ ಭಾಗಗಳ ಲೇಖಕರು, ಸಾಹಿತಿಗಳಿಂದ ಜಂಟಿ ಹೇಳಿಕೆಗಳನ್ನ ಬಿಡುಗಡೆ ಮಾಡಿದ್ದಾರೆ. 

First Published Nov 5, 2022, 7:33 PM IST | Last Updated Nov 5, 2022, 7:33 PM IST

ರಾಜ್ಯದ ಎಲ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಕಾಲ ಧ್ಯಾನ ಮಾಡಿಸಲು ಅಗತ್ಯ ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಆದೇಶ ಹೊರಡಿಸುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಶಿಕ್ಷಣ ಸಚಿವರ ನಿರ್ಧಾರಕ್ಕೆ ನಾಡಿನ ಕೆಲ ಸಾಹಿತಿಗಳು, ಚಿಂತಕರು, ಲೇಖಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಕ್ಷೇಪಿಸಿ ನಾಡಿನ ವಿವಿಧ ಭಾಗಗಳ ಲೇಖಕರು, ಸಾಹಿತಿಗಳಿಂದ ಜಂಟಿ ಹೇಳಿಕೆಗಳನ್ನ ಬಿಡುಗಡೆ ಮಾಡಿದ್ದಾರೆ. 

ಶಾಲೆ-ಕಾಲೇಜಿನಲ್ಲಿ ಧ್ಯಾನ , ಶಿಕ್ಷಣ ಸಚಿವರ ವಿರುದ್ದ ಸಿದ್ದರಾಮಯ್ಯ ಟ್ವೀಟ್ ವಾರ್

ಉಡುಪಿಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಅವರು ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ವೈಜ್ಞಾನಿಕ ಆಧಾರ ಇರಬೇಕು. ಮೊಬೈಲ್ ಚಟದಿಂದ ಮಕ್ಕಳ ಏಕಾಗ್ರತೆ ಕಡಿಮೆಯಾಗಿದೆ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. ಶಾಲೆಗಳನ್ನು ಬಹಳಷ್ಟು ದಿನ ಮುಚ್ಚಿಟ್ಟ ಪರಿಣಾಮ ಮಕ್ಕಳಲ್ಲಿ ಮೊಬೈಲ್ ಚಟ ಹೆಚ್ಚಿದೆ. ಶಾಲೆ ತೆಗೆಯಿರಿ ಎಂದು ಯುನಿಸೆಫ್ ಹೇಳಿದಾಗಲೂ ಶಾಲೆ ಮುಚ್ಚಿದರು. ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಆನ್ಲೈನ್ ಶಿಕ್ಷಣವೇ ಕಾರಣ ಎಂದು ಬೊಟ್ಟು ಮಾಡಿದ್ದಾರೆ ಅಂತ ಹೇಳಿದ್ದಾರೆ.