Asianet Suvarna News Asianet Suvarna News

ದುಬೈ, ಬಹ್ರೇನ್‌ನಲ್ಲಿ ಹೇಗೆ ನಡೆಯುತ್ತಿವೆ ತರಗತಿಗಳು?

ಕೊರೊನಾ ಭಯದ ನಡುವೆ ಶಾಲೆ ಆರಂಭದ ಭೀತಿ ಎದುರಾಗಿದೆ. ಪೋಷಕರಿಗೂ ಭಯ ಶುರುವಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ರಾಜ್ಯದಲ್ಲಿ ಮಾತ್ರವಲ್ಲ, ವಿದೇಶದಲ್ಲಿರುವ ಕನ್ನಡಿಗರು ಏನಂತಾರೆ? ಅಲ್ಲಿಯ ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದೆ. 

ಬೆಂಗಳೂರು (ಅ. 06): ಕೊರೊನಾ ಭಯದ ನಡುವೆ ಶಾಲೆ ಆರಂಭದ ಭೀತಿ ಎದುರಾಗಿದೆ. ಪೋಷಕರಿಗೂ ಭಯ ಶುರುವಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ರಾಜ್ಯದಲ್ಲಿ ಮಾತ್ರವಲ್ಲ, ವಿದೇಶದಲ್ಲಿರುವ ಕನ್ನಡಿಗರು ಏನಂತಾರೆ? ಅಲ್ಲಿಯ ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದೆ. ಜೊತೆಗೆ ಶಿಕ್ಷಣ ತಜ್ಞರೂ ಕೂಡಾ ಮಾತನಾಡಿದ್ದಾರೆ. 

ಶಾಲೆ ಪುನಾರಂಭಕ್ಕೆ ಅನುಮತಿ; ವಿದೇಶದಲ್ಲಿಯೂ ಸುವರ್ಣ ನ್ಯೂಸ್- ಕನ್ನಡ ಪ್ರಭ ರಿಯಾಲಿಟಿ ಚೆಕ್

ಮೊದಲಿಗೆ ದುಬೈ ನೋಡುವುದಾದರೆ ಹೆಚ್ಚಿನ ಶಾಲೆಗಳಲ್ಲಿ ಆನ್‌ಲೈನ್ ತರಗತಿ ಮಾಡುತ್ತಾರೆ. ಕಷ್ಟದ ವಿಷಯಗಳನ್ನು ಶಾಲೆಗಳಲ್ಲೇ ಹೇಳಿಕೊಡ್ತಾರೆ. ಮಂಗಳವಾರ ಹಾಗೂ ಶನಿವಾರ ಬಂದ್ ಮಾಡಿ ಶಾಲೆಗೆ ಸ್ಯಾನಿಟೈಸ್ ಮಾಡಲಾಗುತ್ತದೆ. ಬಹರೇನ್‌ನಲ್ಲಿ ಶೇ. 90 ರಷ್ಟು ಶಾಲೆಗಳು ಆನ್‌ಲೈನ್‌ನಲ್ಲಿಯೇ ನಡೆಯುತ್ತವೆ. ಹೈಬ್ರೀಡ್‌ ಶಾಲೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸ್ ಕಡ್ಡಾಯ ಮಾಡಲಾಗಿದೆ.