ಬಾಗಲಕೋಟೆ: ಪ್ರೌಢಶಾಲಾ ಬಾಲಕಿಯರಿಗೆ ಕರಾಟೆ ಕಲಿಕೆ, ಪೋಷಕರಿಗೆ ಸಮಾಧಾನ

ಬಾಗಲಕೋಟೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸ್ವಯಂರಕ್ಷಣೆ ಸೇರಿದಂತೆ, ಆತ್ಮಸ್ಥೈರ್ಯದ ಜೊತೆಗೆ ಶಿಸ್ತು ಕಲಿಸಿಕೊಡಬೇಕೆನ್ನೋ ಉದ್ದೇಶದಿಂದ, ಪೋಲಿಸ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್​ಪಿಸಿ ಯೋಜನೆಯೊಂದನ್ನ ರೂಪಿಸಿದೆ. 

First Published Oct 6, 2021, 4:42 PM IST | Last Updated Oct 6, 2021, 4:41 PM IST

ಬಾಗಲಕೋಟೆ (ಅ. 06): ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸ್ವಯಂರಕ್ಷಣೆ ಸೇರಿದಂತೆ, ಆತ್ಮಸ್ಥೈರ್ಯದ ಜೊತೆಗೆ ಶಿಸ್ತು ಕಲಿಸಿಕೊಡಬೇಕೆನ್ನೋ ಉದ್ದೇಶದಿಂದ, ಪೋಲಿಸ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್​ಪಿಸಿ ಯೋಜನೆಯೊಂದನ್ನ ರೂಪಿಸಿದೆ. 

ಎಸ್​ಪಿಸಿ ಅಂದ್ರೆ ಸ್ಟುಡೆಂಟ್ ಪೊಲೀಸ್ ಕೆಡೆಟ್​ ಅಂತ. ಅಂದಹಾಗೆ ಈಗ ಬಾಗಲಕೋಟೆ ಜಿಲ್ಲೆಯ 9 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಲ್ಲಿ ಈ ತರಬೇತಿಯನ್ನ ನೀಡಲಾಗುತ್ತಿದೆ. ಪ್ರತಿ ಶನಿವಾರ ಶಾಲಾ ಅವಧಿ ಬಳಿಕ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುತ್ತದೆ. ವಿಶೇಷವಾಗಿ ಕರಾಟೆ, ಯೋಗ ಸೇರಿದಂತೆ ರಕ್ಷಣಾತ್ಮಕ ಅಂಶಗಳನ್ನ ಇಲ್ಲಿ ಹೇಳಿಕೊಡಲಾಗುತ್ತದೆ. ನೋಡಲು ಎನ್​ಸಿಸಿ ಅಂತೆ ಕಾಣಿಸಿದ್ರೂ ಸಹ ಎಸ್​ಪಿಸಿ ಮಾತ್ರ ಸ್ವಲ್ಪ ಡಿಫೆರಂಟ್​ ಆಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಇದೀಗ ವಿದ್ಯಾರ್ಥಿನಿಯರಿಗೆ ಅಷ್ಟೇ ಅಲ್ಲದೆ ಪಾಲಕರಿಗೂ ಸಹ ನೆಮ್ಮದಿ ತಂದಿದೆ ಅಂತಾರೆ ಶಿಕ್ಷಕಿಯರು. 

Video Top Stories