Asianet Suvarna News Asianet Suvarna News

ನಿವೃತ್ತ ಶಿಕ್ಷಕರಿಗೆ ಹೃದಯಸ್ಪರ್ಶಿ ಬಿಳ್ಕೋಡುಗೆ, ಶಾಲಾ ಆವರಣದಲ್ಲಿ ಹಬ್ಬದ ಕಳೆ!

ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರೀತಿಯ ಶಿಕ್ಷಕರಿಗೆ,  ವಿದ್ಯಾರ್ಥಿಗಳು, ಊರಿನ ಯುವಕರು ಹಾಗೂ ನಾಗರಿಕರು ಹೃದಯಸ್ಪರ್ಶಿಯಾಗಿ ಬೀಳ್ಕೊಡುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ. 

First Published Jan 10, 2021, 1:41 PM IST | Last Updated Jan 10, 2021, 1:41 PM IST

ಉತ್ತರಕನ್ನಡ  (ಜ. 10): ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರೀತಿಯ ಶಿಕ್ಷಕರಿಗೆ,  ವಿದ್ಯಾರ್ಥಿಗಳು, ಊರಿನ ಯುವಕರು ಹಾಗೂ ನಾಗರಿಕರು ಹೃದಯಸ್ಪರ್ಶಿಯಾಗಿ ಬೀಳ್ಕೊಡುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ. ಗೋಕರ್ಣದ ದಾಂಡೇಭಾಗ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಇತರ ಭಾಗಗಳಲ್ಲಿ 35 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶಿಕ್ಷಕ ಮಧುಕರ್ ಎಸ್. ನಾಯ್ಕ ಎಂಬವವರನ್ನು ಹೃತ್ಪೂರ್ವಕವಾಗಿ ಬೀಳ್ಕೊಟ್ಟಿದ್ದಾರೆ.  

ಮಧುಕರ್ ನಾಯ್ಕ್‌ ವಿದ್ಯಾರ್ಥಿಗಳು, ಊರಿನವರ ಪಾಲಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು. ಒಂದೇ ತರಹದ ಬಟ್ಟೆ ತೊಟ್ಟು ಆಗಮಿಸಿದ ಊರಿನ ಯುವಕರು ಎರಡು ಬದಿ ಸಾಲಿನಲ್ಲಿ ನಿಂತು ಮಧ್ಯದಲ್ಲಿ ನಿವೃತ್ತರಾದ ಮಧುಕರ್ ನಾಯ್ಕ ಅವರನ್ನು ಬಿಳ್ಕೋಡುವ ಮೂಲಕ ವಿಶೇಷ ಗೌರವ ಸಲ್ಲಿಸಿದರು. ಅಲ್ಲದೇ ಶಿಕ್ಷಕರ ಕಾಲಿಗೆ ಎರಗಿ ಭಾವುಕರಾದರು.  ಅವರು ತಾವು ಶಾಲೆಯ ಅಂಗಳಕ್ಕೆ ತಲೆಬಾಗಿ ನಮಸ್ಕರಿಸುವ ಮೂಲಕ ಸೇವೆ ಸಲ್ಲಿಸಲು ಅವಕಾಶ ನೀಡಿದ ಶಾಲೆಗೂ ಕೃತಜ್ಞತೆ ಸಲ್ಲಿಸಿದರು.

Video Top Stories