Omicron Threat: ಶಾಲೆ-ಕಾಲೇಜು ಬಂದ್, ಮಹಾರಾಷ್ಟ್ರ, ದೆಹಲಿ ಮಾದರಿ ಅನುಸರಿಸುತ್ತಾ ರಾಜ್ಯ ಸರ್ಕಾರ.?

ವಿಶ್ವದಾದ್ಯಂತ ಭಾರೀ ಆತಂಕ ಮೂಡಿಸಿರುವ ಒಮಿಕ್ರೋನ್ (Omicron) ಭಾರತದಲ್ಲಿ 3 ನೇ ಅಲೆಗೆ (3rd Wave) ಕಾರಣವಾಗಿದೆ. ಸೋಂಕು ತಡಗೆ ಕಠಿಣ ನಿರ್ಬಂಧಗಳನ್ನು ಕೈಗೊಳ್ಳುವ ಕುರಿತು ಸಿಎಂ ಬೊಮ್ಮಾಯಿ ತಜ್ಞರು, ತಾಂತ್ರಿಕ ಸಲಹಾ ಸಮಿತಿ ಜೊತೆ ಇಂದು ಮಹತ್ವದ ಸಭೆ ನಡೆಸಲಿದ್ದಾರೆ. 
 

First Published Jan 4, 2022, 10:57 AM IST | Last Updated Jan 4, 2022, 11:50 AM IST

ಬೆಂಗಳೂರು (ಜ. 04): ವಿಶ್ವದಾದ್ಯಂತ ಭಾರೀ ಆತಂಕ ಮೂಡಿಸಿರುವ ಒಮಿಕ್ರೋನ್ (Omicron) ಭಾರತದಲ್ಲಿ 3 ನೇ ಅಲೆಗೆ (3rd Wave) ಕಾರಣವಾಗಿದೆ. ಸೋಂಕು ತಡಗೆ ಕಠಿಣ ನಿರ್ಬಂಧಗಳನ್ನು ಕೈಗೊಳ್ಳುವ ಕುರಿತು ಸಿಎಂ ಬೊಮ್ಮಾಯಿ ತಜ್ಞರು, ತಾಂತ್ರಿಕ ಸಲಹಾ ಸಮಿತಿ ಜೊತೆ ಇಂದು ಮಹತ್ವದ ಸಭೆ ನಡೆಸಲಿದ್ದಾರೆ. 

Mandya: ಸಕ್ಕರೆ ನಾಡಿನಲ್ಲಿ ಕೊರೋನಾ ಅಬ್ಬರ, ಓಂ ಶಕ್ತಿ ಯಾತ್ರೆಗೆ ಹೋಗಿದ್ದ 30 ಮಂದಿಗೆ ಪಾಸಿಟಿವ್

ಸೋಂಕು ಇದೇ ವೇಗದಲ್ಲಿ ಹೆಚ್ಚಿದರೆ, ಒಂದೆರಡು ವಾರಗಳಲ್ಲಿ ಶಾಲೆಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ. ಯಾವ್ಯಾವ ತಾಲ್ಲೂಕುಗಳಲ್ಲಿ ಕೋವಿಡ್ ಪ್ರಕರಣ ವರದಿಯಾಗಿವೆ ಹಾಗೂ ಹೆಚ್ಚಾಗುತ್ತಿದೆಯೋ ಅಂತಹ ತಾಲ್ಲೂಕು ವ್ಯಾಪ್ತಿಯ ಶಾಲೆಗಳನ್ನು ಮೊದಲು ಬಂದ ಮಾಡಲಾಗುತ್ತದೆ. ಮುಂದಿನ ಹಂತಗಳಲ್ಲಿ ವ್ಯಾಪಿಸುತ್ತಾ ಹೋದರೆ ಇತರೆ ತಾಲ್ಲೂಕುಗಳಲ್ಲೂ ಬಂದ್ ಮಾಡಲಾಗುತ್ತದೆ. ಯಾವುದೇ ಪ್ರಕರಣಗಳು ವರದಿಯಾಗದ ಶಾಲೆಗಳಲ್ಲಿ ಯಥಾಪ್ರಕಾರ ಶಾಲೆಗಳು ನಡೆಯಲಿವೆ.