ಉಪವಾಸ ಸತ್ಯಾಗ್ರಹ ಪ್ರತಿಭಟನೆಯಲ್ಲಿ ಕಣ್ಣೀರಿಟ್ಟ ಶಿಕ್ಷಕ; ಸಮಸ್ಯೆ ಸ್ವಲ್ಪ ಕೇಳ್ರಪ್ಪಾ...!

 ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಪ್ರತಿಭಟನೆಯಲ್ಲಿ ಶಿಕ್ಷಕನೋರ್ವ ಗಳಗಳನೇ ಕಣ್ಣೀರು ಹಾಕಿರುವ ಘಟನೆ ನಡೆದಿದೆ. 

First Published Dec 6, 2020, 5:13 PM IST | Last Updated Dec 6, 2020, 5:13 PM IST

 ಧಾರವಾಡ (ಡಿ. 06): ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಪ್ರತಿಭಟನೆಯಲ್ಲಿ ಶಿಕ್ಷಕನೋರ್ವ ಗಳಗಳನೇ ಕಣ್ಣೀರು ಹಾಕಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಬಾವಿ ಗ್ರಾಮದ ಮಕ್ಬುಲ್ ಅಹ್ಮದ್ ಎಂಬಾತ ಶಿಕ್ಷಕ ಮಾಜಿ‌ ಶಾಸಕ ಎನ್.ಎಚ್.ಕೋನರೆಡ್ಡಿ ಅವರ ಎದುರು ಗಳಗಳನೇ ಅತ್ತಿದ್ದಾನೆ.

ಸಂಪುಟ ವಿಸ್ತರಣೆ : ಕೈ ತೊಳೆದುಕೊಂಡ ಉಸ್ತುವಾರಿ, ಬಿಎಸ್‌ವೈಗೆ ಜವಾಬ್ದಾರಿ!

' ನಾನು ಕಳೆದ 20 ವರ್ಷಗಳಿಂದ ಅನುದಾನ ರಹಿತ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು,ಕೇವಲ ತಿಂಗಳಿಗೆ 6 ಸಾವಿರ ವೇತನ ಕೊಡುತ್ತಿದ್ದಾರೆ.ಇದ್ರಿಂದ ಜೀವನ ನಡೆಸುವುದೇ ಕಷ್ಟವಾಗಿದೆ' ಎಂದು ಬಿಕ್ಕಿ ಬಿಕ್ಕಿ ಅತ್ತು ತನ್ನ ಅಳಲನ್ನು ತೋಡಿಕೊಂಡಿದ್ದಾನೆ.