ಹಿಜಾಬ್‌ಗೆ ಅವಕಾಶ ನೀಡದ್ದಕ್ಕೆ, ಪರೀಕ್ಷೆ ಬರೆಯದೇ ವಾಪಾಸಾದ ವಿದ್ಯಾರ್ಥಿನಿ!
ಶಿವಮೊಗ್ಗದಲ್ಲಿ ಹಿಜಾಬ್‌ಗೆ ಅವಕಾಶ ನಿರಾಕರಣೆ, ಪರೀಕ್ಷೆ ಬರೆಯದೇ ವಾಪಾಸಾದ ಖಾಸಗಿ ಶಾಲೆಯ ವಿದ್ಯಾರ್ಥಿನಿ. ಹುಬ್ಬಳ್ಳಿಯಲ್ಲಿ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಗೆ ಅವಕಾಶ ನಿರಾಕರಣೆ.
ಶಿವಮೊಗ್ಗ/ಹುಬ್ಬಳ್ಳಿ (ಮಾ.28): ಹಿಜಾಬ್ (Hijab) ಇಲ್ಲದೆ SSLC ಪರೀಕ್ಷೆ ಬರೆಯಲ್ಲ ಎಂದು ವಿದ್ಯಾರ್ಥಿನಿ ಪರೀಕ್ಷೆ ಬರೆಯದೆ ಮನೆಗೆ ತೆರಳಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ಇಲ್ಲಿನ ಕಸ್ತೂರಿ ಬಾ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿನಿ ತೆರಳಿದ್ದು, ಪೋಷಕರು, ಶಿಕ್ಷಕರು ಮನವೊಲಿಸಲು ಪ್ರಯತ್ನಿಸಿದ್ರು ಅದಕ್ಕೆ ಬಗ್ಗದ ವಿದ್ಯಾರ್ಥಿನಿ ಪರೀಕ್ಷೆಯೇ ಬರೆಯಲ್ಲ ಎಂದು ಮನೆಗೆ ತೆರಳಲು ಮುಂದಾಗಿದ್ದಾಳೆ. ಬಳಿಕ ಕೊನೆ ಪ್ರಯತ್ನದ ಮನವೊಲಿಕೆ ಬಳಿಕ ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾಳೆ ಎಂದು ತಿಳಿದುಬಂದಿದೆ.
SSLC ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು
ಇನ್ನು ಹುಬ್ಬಳ್ಳಿಯ (Hubballi) ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ಬುರ್ಖಾ ಧರಿಸಿದ ವಿದ್ಯಾರ್ಥಿನಿಗೆ ಅವಕಾಶ ನಿರಾಕರಿಸಲಾಗಿದೆ. ಸಮವಸ್ತ್ರದ ಬದಲು ವಿದ್ಯಾರ್ಥಿನಿಯರು ಬುರ್ಖಾ ಧರಿಸಿದ ಬಂದಿದ್ದರು. ಬಳಿಕ ಪೋಷಕರ ಜೊತೆಗೆ ಮನೆಗೆ ತೆರಳಿದ ವಿದ್ಯಾರ್ಥಿನಿ ಸಮವಸ್ತ್ರ ಧರಿಸಿ ಬಂದು ಪರೀಕ್ಷೆ ಬರೆದಿದ್ದಾರೆ.