Covid 19: KCN ರಿಜಿಸ್ಟರ್‌ಗೆ ಸಾವಿರಾರು ವಿದ್ಯಾರ್ಥಿಗಳು, ಅವ್ಯವಸ್ಥೆ ಆಗರ ನರ್ಸಿಂಗ್ ಬೋರ್ಡ್
ಅಧಿಕಾರಿಗಳ ಎಡವಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳು KCN ರಿಜಿಸ್ಟರ್ ಮಾಡಿಸಲು ವಿದ್ಯಾರ್ಥಗಳು ಬಂದಿದ್ದಾರೆ. ಕರ್ನಾಟಕ ನರ್ಸಿಂಗ್ ಬೋರ್ಡ್ ಅವ್ಯವಸ್ಥೆಯ ಆಗರವಾಗಿದೆ.
ಬೆಂಗಳೂರು (ಜ. 19): ಅಧಿಕಾರಿಗಳ ಎಡವಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳು KCN ರಿಜಿಸ್ಟರ್ ಮಾಡಿಸಲು ವಿದ್ಯಾರ್ಥಗಳು ಬಂದಿದ್ದಾರೆ. ಕರ್ನಾಟಕ ನರ್ಸಿಂಗ್ ಬೋರ್ಡ್ ಅವ್ಯವಸ್ಥೆಯ ಆಗರವಾಗಿದೆ. ಕೊರೊನಾ ರೂಲ್ಸ್ ಉಲ್ಲಂಘನೆ, ಮಾಸ್ಕ್ ಇಲ್ಲ, ಇಷ್ಟೊಂದು ಜನ ಸೇರಿದಾಗ ಅಂತರ ಹೇಗೆ ಸಾಧ್ಯ ಹೇಳಿ. ರಾಜಧಾನಿಯಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ರಾಜ್ಯದಲ್ಲಿ 1,148 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದೆ.
ಧಾರವಾಡ (Dharwad) ಕೋಚಿಂಗ್ ಸೆಂಟರ್‌ಗಳಲ್ಲಿ (Coaching Centre) ಕೊರೊನಾ ರೂಲ್ಸ್ ಮಂಗಮಾಯವಾಗಿದೆ. ಒಂದೇ ಕ್ಲಾಸ್‌ರೂಮ್‌ನಲ್ಲಿ 100- 150 ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡಲಾಗುತ್ತಿದೆ. ಕೊರೊನಾ ಸೋಂಕು ಏರಿಕೆಯಾಗುತ್ತಿದ್ದರೂ, ಇಲ್ಲಿ ಯಾವ ಭಯವಿಲ್ಲದೇ ಕ್ಲಾಸ್ ಮಾಡಲಾಗುತ್ತದೆ.