Hijab Row: ಹಿಜಾಬ್-ಕೇಸರಿ ಶಾಲಿನ ಬಗ್ಗೆ ಗೃಹ ಸಚಿವ ಆಗರ ಜ್ಞಾನೇಂದ್ರ ಖಡಕ್ ಪ್ರತಿಕ್ರಿಯೆ

ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ಶಾಲೆಗಳಿಗೆ ಎಲ್ಲಾ ಧರ್ಮದ ಮಕ್ಕಳು ಓದಲು ಬರುತ್ತಾರೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎನ್ನುವ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಪಡೆಯಲು ಸಮವಸ್ತ್ರವು ನೆರವಾಗಲಿದೆ ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

First Published Feb 3, 2022, 3:27 PM IST | Last Updated Feb 4, 2022, 5:12 PM IST

ಬೆಂಗಳೂರು(ಫೆ.03): ಶಾಲೆಗಳು ಯಾರೂ ಹಿಜಾಬ್ ಧರಿಸಬಾರದು ಹಾಗೂ ಕೇಸರಿ ಶಾಲುಗಳನ್ನು ಹಾಕಬಾರದು. ಶಾಲೆಗಳು ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎನ್ನುವ ಭಾವನೆಯನ್ನು ಮೂಡಿಸುತ್ತವೆ. ನಮಗೆ ನಮ್ಮ ಧರ್ಮಗಳನ್ನು ಪ್ರಾರ್ಥನೆಗಳನ್ನು ಮಾಡಲು ದೇವಸ್ಥಾನ, ಚರ್ಚ್‌ ಹಾಗೂ ಮಸೀದಿಗಳಿವೆ. ಆದರೆ ಈ ಗೊಂದಲಗಳನ್ನು ಶಾಲೆಯೊಳಗೆ ತರಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ (School Uniform Compulsory ) ಎಂದು ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ಶಾಲೆಗಳಿಗೆ ಎಲ್ಲಾ ಧರ್ಮದ ಮಕ್ಕಳು ಓದಲು ಬರುತ್ತಾರೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎನ್ನುವ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಪಡೆಯಲು ಸಮವಸ್ತ್ರವು ನೆರವಾಗಲಿದೆ ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

Online Education Apps: ಕೋವಿಡ್ ಕಾಲದಲ್ಲಿ ನೆರವಾದ ಆನ್ಲೈನ್ ಎಜುಕೇಷನ್ ಆಪ್ಸ್

ಮಕ್ಕಳು ಈ ರೀತಿಯ ಹಿಜಾಬ್ (Hijab) ಹಾಗೂ ಕೇಸರಿ ಶಾಲು (Saffron Shawls) ಧರಿಸಿ ಬರುವುದರ ಹಿಂದಿರುವ ಮತೀಯ ಶಕ್ತಿಗಳ ಬಗ್ಗೆ ಗಮನ ಕೊಡಲು ನಾನು ಈಗಾಗಲೇ ಪೊಲೀಸರಿಗೆ ಸೂಚಿಸಿದ್ದೇನೆ. ಈ ದೇಶದ ಐಕ್ಯತೆಗೆ ಧಕ್ಕೆ ತರುವವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.