ಬೀದರ್: ಯುಪಿಎಸ್ಸಿ ಪರೀಕ್ಷೆಯಲ್ಲಿ ಸಹೋದರರ ಸಾಧನೆ, ತಮ್ಮನಿಗೆ ಅಣ್ಣನೇ ಗುರು!
- ಯುಪಿಎಸ್ಸಿ ಪರೀಕ್ಷೆಯಲ್ಲಿ ಮಹಮ್ಮದ್ ಹ್ಯಾರೀಸ್ ಸುಮೈರ್‌ಗೆ 270ನೇ ರ‍್ಯಾಂಕ್
- ಅಣ್ಣ ಮಹಮ್ಮದ್ ನದಿಮುದ್ದೀನ್ ಕಳೆದ ವರ್ಷ ಯುಪಿಎಸ್ಸಿಯಲ್ಲಿ 456ನೇ ರ‍್ಯಾಂಕ್
- ಅಪ್ಪ ಗೃಹ ರಕ್ಷಕದಳದ ನಿವೃತ್ತ ಕಮಾಂಡೆಂಟ್, ತಾಯಿ ಸಬಿಯಾ ಸುಲ್ತಾನ್ ಗೃಹಿಣಿ
ಬೀದರ್(ಸೆ. 29): ಯುಪಿಎಸ್ಸಿ ಪರೀಕ್ಷೆಯಲ್ಲಿ ಬೀದರ್ ನ ಮಹಮ್ಮದ್ ಹ್ಯಾರೀಸ್ ಸುಮೈರ್ 270ನೇ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ಇವರ ಅಣ್ಣ ಮಹಮ್ಮದ್ ನದಿಮುದ್ದೀನ್ ಕಳೆದ ವರ್ಷ ಯುಪಿಎಸ್ಸಿಯಲ್ಲಿ 456ನೇ ರ್ಯಾಂಕ್ ಪಡೆದು ಈಗ ಕೇರಳ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದು,. ತರಬೇತಿಯಲ್ಲಿ ಇದ್ದಾರೆ.
ರಾಜ್ಯದ 16 ಮಂದಿ ಐಎಎಸ್ ಪಾಸ್: ಕನ್ನಡ ಐಚ್ಚಿಕ ವಿಷಯ ತೆಗೆದುಕೊಂಡಿದ್ದ ಅಕ್ಷಯ್ ರಾಜ್ಯಕ್ಕೆ ಪ್ರಥಮ
ಇವರ ತಂದೆ ಮಹಮ್ಮದ್ ನಯಿಮುದ್ದಿನ್ ಸರಕಾರಿ ಪಾಲಿಟೆಕ್ನಿಕ್ ಮತ್ತು ಜೆಟಿಇ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ಗೃಹ ರಕ್ಷಕದಳದ ಕಮಾಂಡೆಂಟ್ ಆಗಿ ನಿವೃತರಾಗಿದ್ದಾರೆ. ತಾಯಿ ಸಬಿಯಾ ಸುಲ್ತಾನ್ ಗೃಹಿಣಿ ಮಕ್ಕಳ ಈ ಅಸಾಧಾರಣ ಸಾಧನೆಯಿಂದಾಗಿ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಮಹಮ್ಮದ್ ಹ್ಯಾರಿಸ್ ಸುಮೈರ್, ಯುಪಿಎಸ್ಸಿ ಪರೀಕ್ಷೆ ಬಗ್ಗೆ ಯಾವುದೇ ಭಯ ಬೇಡ. ಹೆಚ್ಚು ಗಂಟೆಗಳ ಕಾಲ ಓದುವುದು ಅವಶಕತೆ ಇಲ್ಲ,. ಸಾಮಾನ್ಯವಾಗಿ ದಿನದಲ್ಲಿ ನಾಲ್ಕರಿಂದ ಎಂಟು ಗಂಟೆ ಓದುವುದರ ಜೊತೆಗೆ ಆಟ, ವ್ಯಾಯಾಮ ಮಾಡುವುದರ ರಿಂದ ಯಾವುದೇ ಒತ್ತಡ ಇಲ್ಲದೇ ಯುಪಿಎಸ್ಸಿ ತಯಾರಿ ಮಾಡಿಕೊಳ್ಳಬಹುದು ಎಂದರು.