Hijab Row: ಹಿಜಾಬ್ ನಮ್ಮ ಹಕ್ಕು ಎಂದು ರಾಯಚೂರಿನಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ

ರಾಯಚೂರಿನ (Raichur) SSRG ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ಒಪ್ಪದೇ, ಕಾಲೇಜಿನ ಎದುರು ಪ್ರತಿಭಟಿಸಿದರು. ಹಿಜಾಬ್ ನಮ್ಮ ಹಕ್ಕು ಎಂದು ಘೋಷಣೆ ಕೂಗಿದ್ದಾರೆ.

First Published Feb 16, 2022, 3:36 PM IST | Last Updated Feb 16, 2022, 3:36 PM IST

ಬೆಂಗಳೂರು (ಫೆ. 16): ರಾಯಚೂರಿನ (Raichur) SSRG ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ಒಪ್ಪದೇ, ಕಾಲೇಜಿನ ಎದುರು ಪ್ರತಿಭಟಿಸಿದರು. ಹಿಜಾಬ್ ನಮ್ಮ ಹಕ್ಕು ಎಂದು ಘೋಷಣೆ ಕೂಗಿದ್ದಾರೆ.  ಕೋರ್ಟ್ ಆದೇಶದನ್ವಯ ತರಗತಿಗೆ ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಿಲ್ಲ. 

ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಹೆಮ್ಮೆ. ಕೋರ್ಟ್ ಹೆಸರನ್ನು ಹೇಳಿ ನಮ್ಮ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದೀರಿ. ನಾವು ಓದೋದು ಬಿಡಲ್ಲ, ಪ್ರಾಣ ಹೋದರೂ ಹಿಜಾಬ್ ತೆಗೆಯಲ್ಲ' ಎಂದು ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯೊಬ್ಬಳು ಆಕ್ರೋಶಭರಿತಳಾಗಿ ಮಾತನಾಡಿದ್ದಾರೆ. 

'ಕೋರ್ಟ್ ಆದೇಶವನ್ನು ಲೆಕ್ಕಿಸದೇ ಇದ್ದವರನ್ನು ನಮ್ಮ ಪೊಲೀಸರು ಲೆಕ್ಕಿಸಲ್ಲ. ಅವರನ್ನು ತರಗತಿಯೊಳಗೆ ಸೇರಿಸುವುದಿಲ್ಲ. ಆಡಳಿತ ಮಂಡಳಿ, ಶಿಕ್ಷಕರ ಹಿಂದೆ ಪೊಲೀಸರಿದ್ದಾರೆ.  ಗಲಾಟೆ ಮಾಡುವವರು, ರಸ್ತೆಯಲ್ಲಿಯೇ ಇರಲಿ. ತರಗತಿಯೊಳಗೆ ಅವಕಾಶವಿಲ್ಲ' ಎಂದು ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.