ಮುಗಿಯದ Textbook Revision Row, ನಿಟ್ಟುಸಿರು ಬಿಟ್ಟ ಸಿಎಂಗೆ ಮತ್ತೆ ಟೆನ್ಷನ್!

ರೋಹಿತ್ ‌ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ವೇಳೆ ದೊಡ್ಡದೊಂದು ಪ್ರಮಾದ ನಡೆದು ಹೋಗಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಇದ್ದ ಸಂವಿಧಾನ ಶಿಲ್ಪಿ ಎಂಬ ಬಿರುದನ್ನೇ ಚಕ್ರತೀರ್ಥ ಸಮಿತಿ ಕೈಬಿಟ್ಟಿದೆ.

First Published Jun 5, 2022, 12:47 PM IST | Last Updated Jun 5, 2022, 12:47 PM IST

ಬೆಂಗಳೂರು (ಜೂ.5): ಪಠ್ಯಪುಸ್ತಕ ‌ಪರಿಷ್ಕರಣೆ (Textbook Revision) ವಿವಾದ ಮುಗಿಯುವ ಲಕ್ಷಣ ಕಾಣುತ್ತಿಲ್ಲ.  ಒಂದಲ್ಲ ಒಂದು ವಿವಾದಗಳು ದಿನದಿಂದ ದಿನಕ್ಕೆ ಕೊಂಡಿಗೆ ಸೇರಿಕೊಳ್ಳುತ್ತಲೇ ಇದೆ. ಬಸವಣ್ಣನವರ (Basavanna) ವಿವಾದದ ಬಳಿಕ ಈಗ ಅಂಬೇಡ್ಕರ್ (Ambedkar) ವಿವಾದ ಭುಗಿಲೆದ್ದಿದೆ. ಎಲ್ಲಾ ತಣ್ಣಗಾಯ್ತು ಎಂದು ಕೊಂಡಿದ್ದ ಶಿಕ್ಷಣ ಇಲಾಖೆಗೆ (Karnataka Education Department) ಮತ್ತೆ ತಲೆ ಬಿಸಿ ಶುರುವಾಗಿದೆ.  ವಿವಾದ ಮುಗೀತು ಎಂದು ನಿಟ್ಟುಸಿರು ಬಿಟ್ಟ ಸಿಎಂ ಬೊಮ್ಮಾಯಿ ಅವರಿಗೆ ಮತ್ತೆ ಟೆನ್ಶನ್  ಆರಂಭವಾಗಿದೆ.

CDS EXAMNನಲ್ಲಿ ಚಾಲಕನ ಪುತ್ರ ದೇಶಕ್ಕೆ ಫಸ್ಟ್ ರ‍್ಯಾಂಕ್

ರೋಹಿತ್ ‌ಚಕ್ರತೀರ್ಥ (Rohith Chakrathirtha) ನೇತೃತ್ವದ ಪಠ್ಯ ಪರಿಷ್ಕರಣೆ ವೇಳೆ ದೊಡ್ಡದೊಂದು ಪ್ರಮಾದ ನಡೆದು ಹೋಗಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಇದ್ದ ಸಂವಿಧಾನ ಶಿಲ್ಪಿ ಎಂಬ ಬಿರುದನ್ನೇ ಚಕ್ರತೀರ್ಥ ಸಮಿತಿ ಕೈಬಿಟ್ಟಿದೆ.  9ನೇ ತರಗತಿಯ ನಮ್ಮ ಸಂವಿಧಾನ ಪಠ್ಯದಲ್ಲಿ ಈ ಬದಲಾವಣೆ ಕಂಡು ಬಂದಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಪದ ಇತ್ತು.  ಇದರ ಜೊತೆ ಸಂವಿಧಾನ ಕರಡು ಸಮಿತಿ ತನ್ನ ಕಾರ್ಯ ಮುಗಿಸಲು 2 ವರ್ಷ 11 ತಿಂಗಳು 18 ದಿನಗಳನ್ನ ತೆಗೆದುಕೊಂಡಿತ್ತು ಎಂಬ ವಿವರ ಇತ್ತು. ಇದನ್ನೂ ಕೂಡ ರೋಹಿತ್ ಸಮಿತಿ 145 ದಿನ ಸಭೆ ಸೇರಿತ್ತು ಎಂಬ ಅಂಶವನ್ನ ಮಾತ್ರ ಉಲ್ಲೇಖಿಸಿದೆ.