ಸರ್ಕಾರಕ್ಕೆ ಗೊಂದಲ; ಜ. 01 ರಿಂದ ಓಪನ್ ಆಗುತ್ತಾ ಸ್ಕೂಲ್.?
ಬ್ರಿಟನ್ ವೈರಸ್ ರಿಪೋರ್ಟ್ ಮೇಲೆ ಶಾಲೆಗಳ ಪುನಾರಂಭ ನಿಂತಿದೆ. ಕೊರೊನಾ ತಹಬದಿಗೆ ಬಂದಿದೆ ಎಂದು ಜ. 01 ರಿಂದ ಶಾಲೆ, ಕಾಲೇಜುಗಳ ಪುನಾರಂಭ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಇದೀಗ ಸರ್ಕಾರವೇ ಗೊಂದಲದಲ್ಲಿ ಇದ್ದ ಹಾಗೆ ಕಾಣಿಸ್ತಾ ಇದೆ.
ಬೆಂಗಳೂರು (ಡಿ. 25): ಬ್ರಿಟನ್ ವೈರಸ್ ರಿಪೋರ್ಟ್ ಮೇಲೆ ಶಾಲೆಗಳ ಪುನಾರಂಭ ನಿಂತಿದೆ. ಕೊರೊನಾ ತಹಬದಿಗೆ ಬಂದಿದೆ ಎಂದು ಜ. 01 ರಿಂದ ಶಾಲೆ, ಕಾಲೇಜುಗಳ ಪುನಾರಂಭ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಇದೀಗ ಸರ್ಕಾರವೇ ಗೊಂದಲದಲ್ಲಿ ಇದ್ದ ಹಾಗೆ ಕಾಣಿಸ್ತಾ ಇದೆ. ಮರು ಪರಿಶೀಲನೆ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರೆ, ಜ. 01 ಕ್ಕೆ ಶಾಲೆ ಪುನಾರಂಭ ಪಕ್ಕಾ ಎಂದು ಸುಧಾಕರ್ ಹೇಳಿದ್ದಾರೆ. ಹಾಗಾಗಿ ಸರ್ಕಾರ ಗೊಂದಲಕ್ಕೆ ತೆರೆ ಎಳೆಯಬೇಕಾಗಿದೆ.