Covid 19: ಪಾಸಿಟಿವಿಟಿ ದರ ಹೆಚ್ಛಾದರೆ ಶಾಲೆಗಳು ಬಂದ್, ಕೇರ್ ಸೆಂಟರ್‌ ಆಗಿ ಮಾರ್ಪಾಡು

ರಾಜ್ಯಾದ್ಯಂತ ಕೊರೊನಾ ಕೇಸ್ (Corona Case) ಹೆಚ್ಚಳವಾಗುತ್ತಿದ್ದು, ಪಾಸಿಟಿವಿಟಿ ದರ ಹೆಚ್ಚಾದರೆ ಶಾಲೆಗಳನ್ನು (School) ಬಂದ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಶಾಲೆಗಳು ಬಂದ್ ಆಗಿವೆ. ಇನ್ನೂ 2 ವಾರಗಳ ಕಾಲ ಬಂದ್ ಮಾಡುವ ಚಿಂತನೆ ಇದೆ. 

First Published Jan 11, 2022, 12:00 PM IST | Last Updated Jan 11, 2022, 12:00 PM IST

ಬೆಂಗಳೂರು (ಜ. 11): ರಾಜ್ಯಾದ್ಯಂತ ಕೊರೊನಾ ಕೇಸ್ (Corona Case) ಹೆಚ್ಚಳವಾಗುತ್ತಿದ್ದು, ಪಾಸಿಟಿವಿಟಿ ದರ ಹೆಚ್ಚಾದರೆ ಶಾಲೆಗಳನ್ನು (School) ಬಂದ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಶಾಲೆಗಳು ಬಂದ್ ಆಗಿವೆ. ಇನ್ನೂ 2 ವಾರಗಳ ಕಾಲ ಬಂದ್ ಮಾಡುವ ಚಿಂತನೆ ಇದೆ. 1 ರಿಂದ 9 ನೇ ತರಗತಿಯವರೆಗೆ ಶಾಲೆಗಳು ಬಂದ್ ಆಗುವ ಸಾಧ್ಯತೆ ಇದೆ. 

ಪಾಸಿಟಿವಿಟಿ ದರ ಹೆಚ್ಚಾದರೆ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಿ, ಕೊರೋನಾ ಸೆಂಟರ್ ಆಗಿ ಬದಲಾಗುವ ಸಾಧ್ಯತೆ ಇದೆ. ಇನ್ನು ಬೇರೆ ರಾಜ್ಯಗಳ ಸ್ಥಿತಿ ನೋಡುವುದಾದರೆ ಕೋವಿಡ್‌ ಸೋಂಕು ಸ್ಫೋಟಗೊಳ್ಳುತ್ತಿರುವ ಕಾರಣ ಫೆ.15ರ ವರೆಗೆ ಶಾಲೆ, ಕಾಲೇಜು ಮತ್ತು ಕೋಚಿಂಗ್‌ ಸೆಂಟರ್‌ಗಳನ್ನು ಮುಚ್ಚಲು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.