ಹೆಡ್ಗೇವಾರ್ ದೇಶದ್ರೋಹಿ, ಪಠ್ಯದಲ್ಲಿ ಅವರ ಭಾಷಣ ಬೇಡ: ಸಿಎಫ್‌ಐ
10ನೇ ತರಗತಿ ಪಠ್ಯಪುಸ್ತಕದಲ್ಲಿ ಆರ್.ಎಸ್.ಎಸ್ ( RSS )ಸಂಸ್ಥಾಪಕ ಹೆಡ್ಗೆವಾರ್ (Hedgewar) ಅವರ ಭಾಷಣ ಸೇರ್ಪಡೆಗೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಬೆಂಗಳೂರು, (ಮೇ.17): 10ನೇ ತರಗತಿ ಪಠ್ಯಪುಸ್ತಕದಲ್ಲಿ ಆರ್.ಎಸ್.ಎಸ್ ( RSS )ಸಂಸ್ಥಾಪಕ ಹೆಡ್ಗೆವಾರ್ (Hedgewar) ಅವರ ಭಾಷಣ ಸೇರ್ಪಡೆಗೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ವಿವಾದದ ಸುಳಿಯಲ್ಲಿ ಪಠ್ಯ ಪುಸ್ತಕ; ಸುಕುಮಾರಸ್ವಾಮಿ ಪಠ್ಯ ಕೈಬಿಟ್ಟು ಹೆಡ್ಗೆವಾರ್ ಪಾಠ
ಹೆಡ್ಗೆವಾರ್ ಅವರ ಭಾಷಣ ದೇಶದ್ರೋಹಿಯ ಭಾಷಣ ಎಂದು ಕ್ಯಾಂಪಸ್ ಫ್ರಂಟ್ (Campus Front) ಆರೋಪಿಸಿದೆ. ಶಿಕ್ಷಣ ಇಲಾಖೆ (Education Department) ದೇಶದ್ರೋಹಿಯ ಭಾಷಣ ಸೇರಿಸಿದೆ ಅಂತ ಕರ್ನಾಟಕ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಹೆಡ್ಗೆವಾರ್ ಭಾಷಣ ಪಠ್ಯದಿಂದ ಹಿಂತೆಗೆಯಬೇಕೆಂದು ಒತ್ತಾಯ ಮಾಡಿದ್ದಾರೆ.