ಒಂದೇ ಮೆಸೇಜ್, ಭವಿಷ್ಯದ ವೈದ್ಯ ಲಿಂಗರಾಜುಗೆ ಆಸೆರೆಯಾಗಿದ್ದು ಜಯಪ್ರಕಾಶ್ ಶೆಟ್ಟಿ

ರಾಯಚೂರಿನ ಮಾನ್ವಿಯ ಲಿಂಗರಾಜುಗೆ ವೈದ್ಯನಾಗಬೇಕೆಂಬ ಆಸೆ. ವೃತ್ತಿ ಪ್ರವೇಶ ಪರೀಕ್ಷೆ ಎದುರಿಸಲು ಉಚಿತ ಕೋಚಿಂಗ್​ ಸಿಗದೇ ಪರದಾಡುತ್ತಿದ್ದ ಲಿಂಗರಾಜು ಮೊರೆ ಹೋಗಿದ್ದು ನಮ್ಮ ಜಯಪ್ರಕಾಶ್ ಶೆಟ್ಟಿ ಅವರನ್ನು. ಫೇಸ್​ಬುಕ್​​ನಲ್ಲಿ ಮೆಸೇಜ್​ ಹಾಕಿದ ಲಿಂಗರಾಜು ನೆರವಿಗೆ ಧಾವಿಸಿದ ಶೆಟ್ಟರು

First Published Mar 18, 2022, 9:39 PM IST | Last Updated Mar 18, 2022, 9:39 PM IST

ರಾಯಚೂರಿನ ಮಾನ್ವಿಯ ಲಿಂಗರಾಜುಗೆ ವೈದ್ಯನಾಗಬೇಕೆಂಬ ಆಸೆ. ವೃತ್ತಿ ಪ್ರವೇಶ ಪರೀಕ್ಷೆ ಎದುರಿಸಲು ಉಚಿತ ಕೋಚಿಂಗ್​ ಸಿಗದೇ ಪರದಾಡುತ್ತಿದ್ದ ಲಿಂಗರಾಜು ಮೊರೆ ಹೋಗಿದ್ದು ನಮ್ಮ ಜಯಪ್ರಕಾಶ್ ಶೆಟ್ಟಿ ಅವರನ್ನು. ಫೇಸ್​ಬುಕ್​​ನಲ್ಲಿ ಮೆಸೇಜ್​ ಹಾಕಿದ ಲಿಂಗರಾಜು ನೆರವಿಗೆ ಧಾವಿಸಿದ ಶೆಟ್ಟರು, ಪರಿಶ್ರಮ ಅಕಾಡೆಮಿಯ ಪ್ರದೀಪ್​ ಅವರೊಂದಿಗೆ ಚರ್ಚಿಸಿ, ಲಿಂಗರಾಜುಗೆ ಉಚಿತ ಕೋಚಿಂಗ್ ವ್ಯವಸ್ಥೆ ಮಾಡಿದ್ರು. 

ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡುತ್ತೆ ಹೈದರಾಬಾದ್ ಬಾಲಕನ ಹೊಸ ಐಡಿಯಾ!

ಈಗ ನೀಟ್​ ಪರೀಕ್ಷೆಯಲ್ಲಿ 2300 rank ಗಳಿಸಿದ ಲಿಂಗರಾಜು ರಾಯಚೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾನೆ. ವೈದ್ಯನಾಗಬೇಕೆಂಬ ಲಿಂಗರಾಜು ಕನಸಿಗೆ ನೀರೆರೆದು ಪೋಷಿಸಿದ Jai Prakash Shetty Uppala ರಿಗೆ ಅಭಿನಂದನೆಗಳು. ಈವರೆಗೂ ಒಮ್ಮೆಯೂ ಶೆಟ್ಟರನ್ನು ಮುಖಾಮುಖಿ ನೋಡದ ಲಿಂಗರಾಜು,  ಇದೀಗ ವೈದ್ಯಕೀಯ ಸೀಟು ಪಡೆದುಕೊಂಡು  ಸುವರ್ಣ ಕಚೇರಿಗೆ ಬಂದು ಸಿಹಿಹಂಚಿದ್ರು. ಭವಿಷ್ಯದ ವೈದ್ಯ ಲಿಂಗರಾಜು ಮುಖದಲ್ಲಿ ಗೆದ್ದ ಸಂಭ್ರಮ.. ಶೆಟ್ಟರ ಮುಖದಲ್ಲಿ ಸಾರ್ಥಕತೆಯ ಭಾವ....

Video Top Stories