Asianet Suvarna News Asianet Suvarna News

ಸೆಪ್ಟೆಂಬರ್ ನಂತ್ರ ಶಾಲೆ ತೆರೆಯುವುದು ಸೂಕ್ತ: ಸುಬುಧೇಂದ್ರ ತೀರ್ಥರು

*  ರಾಜ್ಯಾದ್ಯಂತ ಆ. 23ರಿಂದ ಶಾಲಾ- ಕಾಲೇಜು ಪುನಾರಂಭ
*  ಶಾಲೆಯ ತರಗತಿ ಆರಂಭದ ಬಗ್ಗೆ ‌ಶಿಕ್ಷಣ ಸಚಿವರ ಮಾತುಕತೆ ಆಗಿದೆ
*  ಪುನಃ ಪರಿಶೀಲನೆ ಮಾಡಿ  ತರಗತಿಗಳು ಆರಂಭಿಸಲು ಸೂಚನೆ

ರಾಯಚೂರು(ಆ.19): ಶಾಲೆಯ ತರಗತಿ ಆರಂಭದ ಬಗ್ಗೆ ‌ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರ ಜೊತೆ ಮಾತುಕತೆ ಆಗಿದೆ. ಕಳೆದ ಒಂದೂವರೆ ವರ್ಷದಿಂದ ತರಗತಿಗಳು ಆನ್‌ಲೈನ್‌‌ನಲ್ಲಿ ನಡೆಯುತ್ತಿವೆ. ಆನ್‌ಲೈನ್ ಕ್ಲಾಸ್‌ನಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ. ರಾಜ್ಯಾದ್ಯಂತ ಆ. 23ರಿಂದ ಶಾಲಾ- ಕಾಲೇಜು ಪುನಾರಂಭ ವಿಚಾರದ ಬಗ್ಗೆ ಮಾತನಾಡಿದ ಶ್ರೀಗಳು,  3ನೇ ಅಲೆ ಮಕ್ಕಳಿಗೆ ಪರಿಣಾಮ ಆಗುತ್ತೆ ಎಂಬ ಭೀತಿ ಇದೆ.  ಪುನಃ ಪರಿಶೀಲನೆ ಮಾಡಿ  ತರಗತಿಗಳು ಆರಂಭಿಸಲು ಸೂಚನೆ ನೀಡಿದ್ದೇವೆ. ಸೆಪ್ಟೆಂಬರ್ ‌ನಂತರ‌ ಶಾಲೆ ತರಗತಿಗಳು ಆರಂಭಿಸಿದ್ರೆ ಯೋಗ್ಯ ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. 

ಯಾದಗಿರಿ: ಲಸಿಕೆ ಪಡೆಯಲು ಜನರ ಹಿಂದೇಟು, ವ್ಯಾಕ್ಸಿನ್‌ ಡ್ರೈವ್‌ ಹೆಚ್ಚಿಸಲು ಹರಸಾಹಸ

Video Top Stories