ಬೆಂಗಳೂರು ವಿವಿಯಲ್ಲಿ ಬಿಕಾಂಗೆ ಭಾರೀ ಬೇಡಿಕೆ, ಕಾರಣ ಇದಂತೆ..!

2023-24 ನೇ ವರ್ಷದ ದಾಖಲಾತಿ ಪ್ರಕ್ರಿಯೆಯನ್ನು ಬೆಂಗಳೂರು ಸಿಟಿ ಯೂನಿವರ್ಸಿಟಿ ಪ್ರಾರಂಭಿಸಿದ್ದು,  ಬೆಂಗಳೂರು ಸಿಟಿ ಯೂನಿವರ್ಸಿಟಿಯಲ್ಲಿ ಬಿಕಾಂ ಗೆ ಭಾರೀ ಬೇಡಿಕೆಯಿದೆ. 

First Published Apr 28, 2023, 3:34 PM IST | Last Updated Apr 28, 2023, 4:00 PM IST

2023-24 ನೇ ವರ್ಷದ ದಾಖಲಾತಿ ಪ್ರಕ್ರಿಯೆಯನ್ನು ಬೆಂಗಳೂರು ಸಿಟಿ ಯೂನಿವರ್ಸಿಟಿ ಪ್ರಾರಂಭಿಸಿದ್ದು,  ಬೆಂಗಳೂರು ಸಿಟಿ ಯೂನಿವರ್ಸಿಟಿಯಲ್ಲಿ ಬಿಕಾಂ ಗೆ ಭಾರೀ ಬೇಡಿಕೆಯಿದೆ. ಅದಲ್ಲದೆ ನಾಲ್ಕು ಹೊಸ ಕೋರ್ಸ್‌ನ್ನು ಯೂನಿವರ್ಸಿಟಿ  ಪ್ರಾರಂಭಿಸಿದೆ.ಇನ್ನು ಪಿಯುಸಿ ‌ನಂತರ  ಬಿಕಾಂ ಮಾಡಿದರೆ  ಏನು ಪ್ರಯೋಜ ಎನ್ನುವುದರ ಬಗ್ಗೆ ಸುವರ್ಣ ನ್ಯೂಸ್‌ ಜತೆ  ಪ್ರೊಫೆಸರ್ ಮುನಿರಾಜು ಮಾತನಾಡಿದ್ದು ಪಿಯುಸಿ ನಂತರ  ಬಿಕಾಂ ತೆಗೆದುಕೊಂಡರೆ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ. ಬಿಕಾಂ ಮಾಡಿದ ವ್ಯಕ್ತಿಯು ಕನಿಷ್ಠ ವಾರ್ಷಿಕ ನಾಲ್ಕು ಲಕ್ಷ ಆದಯವನ್ನು ಸರಾಸರಿ ಪಡೆಯುತ್ತಾನೆ.ಬೆಂಗಳೂರಿನ 230  ಕಾಲೇಜಿನಲ್ಲಿ ಶೇಕಡಾ 80 ರಷ್ಟು ಮಂದಿಗೆ ಕೆಲಸ ಸಿಕ್ಕಿದೆ ಎಂದು  ಬೆಂಗಳೂರು ಸಿಟಿ ಯೂನಿವರ್ಸಿಟಿ ಕಾರ್ಮಸ್ ವಿಭಾಗದ ಪ್ರೊಫೆಸರ್ ಮುನಿರಾಜು ಹೇಳಿದ್ದಾರೆ.


 

Video Top Stories