Udupi MGM College Hijab Controversy: ಎಂಜಿಎಂ ಕಾಲೇಜಿನಲ್ಲಿ ಎಚ್ಚೆತ್ತ ಆಡಳಿತ ಮಂಡಳಿ, ಸದ್ಯಕ್ಕೆ ತಣ್ಣಗಾದ ಹಿಜಾಬ್ ವಿವಾದ

ಉಡುಪಿ ಜಿಲ್ಲೆಯ ಎಂಜಿಎಂ  ಕಾಲೇಜು ಆಡಳಿತ ಮಂಡಳಿ  ಹಿಜಾಬ್ ಧರಿಸಿ ಬರದಂತೆ ಆದೇಶಿಸಿದ್ದು, ಇದಕ್ಕೆ ವಿದ್ಯಾರ್ಥಿನಿಯರು ಒಪ್ಪಿಗೆ ಸೂಚಿಸಿದ್ದಾರೆ. ಒಂದು ವೇಳೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ ಉಳಿದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವುದಾಗಿ ಎಚ್ಚರಿಕೆ ನೀಡಿದ್ದಾರೆ. 

First Published Feb 7, 2022, 8:17 PM IST | Last Updated Feb 7, 2022, 8:17 PM IST

ಉಡುಪಿ (ಫೆ.7): ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ  ಆರಂಭವಾದ ಹಿಜಾಬ್ (Hijab) ಹಾಗೂ ಕೇಸರಿ ಶಾಲು (Saffron Shawl) ವಿವಾದ ಇದೀಗ ಕರ್ನಾಟಕ ರಾಜ್ಯಾದ್ಯಂತ ವ್ಯಾಪಿಸಿದೆ.  ಇದೀಗ ಜಿಲ್ಲೆಯ ಮತ್ತೊಂದು ಪ್ರತಿಷ್ಠಿತ  ಕಾಲೇಜಿನಲ್ಲೂ ಈ ವಿವಾದ ಕಾಣಿಸಿಕೊಂಡಿದೆ.  ಎಂಜಿಎಂ (Mahatma Gandhi Memorial College ) ಕಾಲೇಜು ಆಡಳಿತ ಮಂಡಳಿ ಮಂಗಳವಾರದಿಂದ ಹಿಜಾಬ್ ಧರಿಸಿ ಬರದಂತೆ ಆದೇಶಿಸಿದ್ದು, ಇದಕ್ಕೆ ವಿದ್ಯಾರ್ಥಿನಿಯರು ಒಪ್ಪಿಗೆ ಸೂಚಿಸಿದ್ದಾರೆ. ಒಂದು ವೇಳೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ ಉಳಿದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವುದಾಗಿ ಎಚ್ಚರಿಕೆ ನೀಡಿದ್ದಾರೆ. 

Thirthahalli Hijab Row: ಗೃಹ ಸಚಿವರ ತವರು ತೀರ್ಥಹಳ್ಳಿ ಸರಕಾರಿ ಕಾಲೇಜಿಗೆ ತಲುಪಿದ ಹಿಜಾಬ್ ವಿವಾದ

ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿರುವುದಕ್ಕೆ ಬಾಕಿ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು ಈ ಹಿನ್ನೆಲೆಯಲ್ಲಿ ತಕ್ಷಣ ಕಾಲೇಜು ಆಡಳಿತ ಮಂಡಳಿ ಸಭೆ ನಡೆಸಿ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದೆ. ವಸ್ತ್ರ ಸಂಹಿತೆ ಬಗ್ಗೆ ಸರ್ಕಾರದ ಆದೇಶ ಕುರಿತು ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದೆ ಎನ್ನಲಾಗಿದೆ.