Forestry Students Reservation ಮೀಸಲಾತಿ ಕಡಿತದ ವಿರುದ್ಧ ಅರಣ್ಯ ವಿದ್ಯಾರ್ಥಿಗಳ ಪ್ರತಿಭಟನೆ

ರಾಜ್ಯ ಸರ್ಕಾರ ಎಸಿಎಫ್ ಮತ್ತು ಆರ್ ಎಫ್ಓ ಹುದ್ದೆಗೆ ನೇರ ನೇಮಕಾತಿಗಾಗಿದ್ದ ಮೀಸಲಾತಿಯನ್ನು ಶೇ. 75ರಿಂದ ಶೇ.50ಕ್ಕೆ ಇಳಿಕೆ ಮಾಡಿದೆ. ಇದರಿಂದ ಅರಣ್ಯ ವಿಜ್ಞಾನ ಪದವೀಧರ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಿದ್ದಾರೆ.

First Published Apr 13, 2022, 5:17 PM IST | Last Updated Apr 13, 2022, 5:17 PM IST

ಕಾರವಾರ(ಏ.13): ರಾಜ್ಯ ಸರ್ಕಾರ ಎಸಿಎಫ್ ಮತ್ತು ಆರ್ ಎಫ್ಓ ಹುದ್ದೆಗೆ ನೇರ ನೇಮಕಾತಿಗಾಗಿದ್ದ ಮೀಸಲಾತಿಯನ್ನು ಶೇ. 75ರಿಂದ ಶೇ.50ಕ್ಕೆ ಇಳಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಇದರಿಂದ ಅರಣ್ಯ ವಿಜ್ಞಾನ ಪದವೀಧರ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದು, ಮೀಸಲಾತಿಯಲ್ಲಿ ಸರಕಾರ‌ ತಮಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ಮತ್ತು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಅರಣ್ಯ ವಿಜ್ಞಾನ ವಿದ್ಯಾರ್ಥಿಗಳು ಕಾಲೇಜು ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

LINKEDIN RESEARCH 2022ರಲ್ಲಿ ಉದ್ಯೋಗ ಬಿಡಲು ಶೇ.70ರಷ್ಟು ಮಹಿಳೆಯರು ಮುಂದು!

ಸರ್ಕಾರ ಹೊರಡಿಸಿದ ಹೊಸ ಅಧಿಸೂಚನೆ ಅನ್ವಯ ಅರಣ್ಯವಿಜ್ಞಾನ ಪದವೀಧರರಿಗೆ ಶೇ 50ರಷ್ಟು, ಉಳಿದ ಅರ್ಧದಷ್ಟು ಅನ್ಯ ವಿಜ್ಞಾನ ಸಂಬಂಧಿತ ವಿಷಯಗಳ ಪದವೀಧರರಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಅರಣ್ಯ ಶಾಸ್ತ್ರ ಓದುತ್ತಿರುವ ವಿದ್ಯಾರ್ಥಿಗಳ ಅಸಮಧಾನಕ್ಕೆ ಕಾರಣವಾಗಿದೆ. ಈ ಕಾರಣದಿಂದ ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಅರಣ್ಯ ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ‌ ಮುಷ್ಕರ ನಡೆಸುತ್ತಿದ್ದಾರೆ. ಪ್ರತೀ ವರ್ಷ ಶಿರಸಿಯ ಅರಣ್ಯ ವಿಜ್ಞಾನ ಕಾಲೇಜಿನಿಂದ 120 ವಿದ್ಯಾರ್ಥಿಗಳು ಪದವೀಧರರರಾಗಿ ಹೊರಬರ್ತಿದ್ದಾರೆ. ಆದ್ರೆ, ಅರಣ್ಯ ಶಾಸ್ತ್ರ ಓದಿದ ಪದವಿಧರರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ ಎಂಬುದು ಈ ವಿದ್ಯಾರ್ಥಿಗಳ ಅಳಲು.