ದ್ವಿತೀಯ ಪಿಯುಸಿ ರಿಪಿಟರ್ಸ್‌ಗೆ ಗುಡ್‌ನ್ಯೂಸ್! ಇವರಿಗೂ ಸಿಗಲಿದೆ ಪಾಸ್ ಭಾಗ್ಯ.?
- ಪರೀಕ್ಷೆ ಇಲ್ಲದೆ ದ್ವಿತೀಯ ಪಿಯುಸಿ ರಿಪೀಟರ್ಸ್ ಪಾಸ್?
- ಪುನರಾವರ್ತಿತ ಪಿಯು ವಿದ್ಯಾರ್ಥಿಗಳನ್ನೂ ಪಾಸು ಮಾಡಿ
- ತಜ್ಞರ ಸಮಿತಿಯಿಂದ ಇಲಾಖೆಗೆ ಶಿಫಾರಸು: ಮೂಲಗಳು
ಬೆಂಗಳೂರು (ಜೂ. 30): ಹೊಸ (ಫ್ರೆಷರ್ಸ್) ವಿದ್ಯಾರ್ಥಿಗಳಂತೆ ಪುನರಾವರ್ತಿತ ವಿದ್ಯಾರ್ಥಿಗಳಿಗೂ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ರಚಿಸಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಹೊಸ ಮಾದರಿಯ ಪರೀಕ್ಷೆ ಬಗ್ಗೆ ಭಯ ಬೇಡ: ಇಲ್ಲಿದೆ ನೋಡಿ SSLC ಮಾದರಿ ಪ್ರಶ್ನೆ ಪತ್ರಿಕೆ
ಈ ವರದಿಯನ್ನು ಇಂದು ಶಿಕ್ಷಣ ಸಚಿವರು ಸಿಎಂ ಮುಂದಿಡಲಿದ್ದಾರೆ. ಸಿಎಂ ಸಮ್ಮತಿಸಿದ ಎರಡು ದಿನಗಳಲ್ಲಿ ನಿರ್ಧಾರ ಹೊರ ಬೀಳಲಿದೆ. ಬಹುತೇಕ ಸಮ್ಮತಿ ಸಿಗುವ ಎಲ್ಲಾ ಸಾಧ್ಯತೆಗಳಿದ್ದು, ಇದರೊಂದಿಗೆ ಸುಮಾರು ಒಂದು ಲಕ್ಷದಷ್ಟು ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲದೆ ಈ ಬಾರಿ ದ್ವಿತೀಯ ಪಿಯುಸಿ ಪಾಸಾಗುವ ಭಾಗ್ಯ ದೊರೆಯಲಿದೆ.