ಉತ್ತಮ ಅಂಕ ಇದ್ದರೂ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಿಲ್ಲ ಅಡ್ಮಿಶನ್, ಶಿಕ್ಷಣ ಸಚಿವರೇ ಗಮನಿಸಿ
- ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಡ್ಮಿಷನ್ ನೀಡಲು ಕಾಲೇಜುಗಳು ಹಿಂದೇಟು
- ಮೌಲ್ಯಾಂಕನ ಮಾದರಿಯಿಂದ ಕೆಲವು ವಿದ್ಯಾರ್ಥಿಗಳಿಗೆ ವರ ಇನ್ನೂ ಕೆಲವರಿಗೆ ಶಾಪ
- ಶೇಕಡಾ 90 ರಿಂದ 95 ರಷ್ಟು ಅಂಕ ಪಡೆದು ತೇರ್ಗಡೆಗೊಂಡಿದ್ದರೂ ಪ್ರವೇಶ ಇಲ್ಲ
ಧಾರವಾಡ (ಅ. 04): ಕೋವಿಡ್ ಆತಂಕದಿಂದಾಗಿ ರಾಜ್ಯ ಸರ್ಕಾರ ಪಿಯುಸಿ ವಿದ್ಯಾರ್ಥಿಗಳನ್ನು ಮೌಲ್ಯಾಂಕನ ಆಧಾರದಲ್ಲಿ ತೇರ್ಗಡೆ ಮಾಡಿದೆ. ಆದರೆ ಸರ್ಕಾರದ ಆದೇಶವನ್ನು ಕೆಲ ವಿದ್ಯಾರ್ಥಿಗಳು ವಿರೋಧಿಸಿ, ಪರೀಕ್ಷೆ ಬರೆಯುವುದಾಗಿ ಹೇಳಿದ್ದರು. ಅದರಂತೆ ಸರ್ಕಾರ ಅಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯುವ ಅವಕಾಶ ನೀಡಿತ್ತು. ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಶೇಕಡಾ 90 ರಿಂದ 95 ರಷ್ಟು ಅಂಕ ಪಡೆದು ತೇರ್ಗಡೆಗೊಂಡಿದ್ದಾರೆ.
ಪುತ್ತೂರು ವಿದ್ಯಾರ್ಥಿಯ ಬಿಇ ಕಾಲೇಜು ಶುಲ್ಕ ಕಟ್ಟಿದ ಪರಮೇಶ್ವರ್
ಈಗ ಎದುರಾಗಿರುವ ಸಮಸ್ಯೆ ಎಂದರೆ ಮೌಲ್ಯಾಂಕನದ ಆಧಾರದ ಮೇಲೆ ಪಾಸ್ ಆದ ವಿದ್ಯಾರ್ಥಿಗಳಿಗೆ ಸ್ನಾತಕ ಪದವಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ನೂರಕ್ಕೆ ನೂರರಷ್ಟು ದಾಖಲಾತಿ ಆಗಿದೆ. ಹೀಗಾಗಿ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಡ್ಮಿಷನ್ ನೀಡಲು ಹಿಂದೇಟು ಹಾಕಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದಾರೆ. ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಿ ಎಂದು ವಿಶ್ವವಿದ್ಯಾಲಯಆದೇಶ ಹೊರಡಿಸಿದೆ. ಆದ್ರೆ ಕಾಲೇಜುಗಳು ವಿಶ್ವವಿದ್ಯಾಲಯದ ಆದೇಶಕ್ಕೂ ಬಗ್ಗುತ್ತಿಲ್ಲ.