ವಿದ್ಯಾಕಾಶಿ ಧಾರವಾಡಕ್ಕೆ ಮತ್ತೊಂದು ಶೈಕ್ಷಣಿಕ ಕಿರೀಟ: ಉದ್ಘಾಟನೆಗೆ ರೆಡಿ ಐಐಐಟಿ ಕ್ಯಾಂಪಸ್!

ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇಯಾದ ಹಿರಿಮೆ ಹೊಂದಿರೋ ಧಾರವಾಡಕ್ಕೆ (Dharwad)ಈಗ ಮತ್ತೊಂದು ಶೈಕ್ಷಣಿಕ ಕಿರೀಟ್ ರೂಪಗೊಂಡಿದೆ. ಅದು ಕೂಡ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮಹತ್ವಾಕಾಂಕ್ಷೆಯ ವಿದ್ಯಾಸಂಸ್ಥೆ ಅನ್ನೋದು ಮತ್ತೊಂದು ವಿಶೇಷ. 

First Published Apr 1, 2022, 11:24 AM IST | Last Updated Apr 1, 2022, 11:24 AM IST

 ಧಾರವಾಡ (ಏ. 01): ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇಯಾದ ಹಿರಿಮೆ ಹೊಂದಿರೋ ಧಾರವಾಡಕ್ಕೆ (Dharwad)ಈಗ ಮತ್ತೊಂದು ಶೈಕ್ಷಣಿಕ ಕಿರೀಟ್ ರೂಪಗೊಂಡಿದೆ. ಅದು ಕೂಡ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮಹತ್ವಾಕಾಂಕ್ಷೆಯ ವಿದ್ಯಾಸಂಸ್ಥೆ ಅನ್ನೋದು ಮತ್ತೊಂದು ವಿಶೇಷ. 

ಧಾರವಾಡ (Dharwad)ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಬಳಿಯ ಸುಮಾರು 60 ಎಕರೆ ಪ್ರದೇಶದಲ್ಲಿ 114 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದೆ. 2019 ರಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಹುಬ್ಬಳ್ಳಿಯಲ್ಲಿ (Hubballi) ಶಿಲಾನ್ಯಾಸ ನೇರವೇರಿಸಿದ್ದರು. ಸದ್ಯ ಈ ಕ್ಯಾಂಪಸ್ ಉದ್ಘಾಟನೆಗೆ ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಇಡೀ ಕ್ಯಾಂಪಸ್ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದು ತಿಂಗಳಿನಲ್ಲಿ ಈ ಕ್ಯಾಂಪಸ್ ನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಅವರೇ ಆಗಮಿಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. 

ಈಗಾಗಲೇ ಐಐಐಟಿ ಕೆಲಸ ಶುರು ಮಾಡಿ ಏಳು ವರ್ಷಗಳೇ ಕಳೆದಿವೆ. ಆರಂಭದಿಂದಲೂ ಈ ಸಂಸ್ಥೆ ಹುಬ್ಬಳ್ಳಿಯ ಐಟಿ ಪಾರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದೇ ಇರೋದ್ರಿಂದ ಸಾಕಷ್ಟು ಸಮಸ್ಯೆ ಆಗಿತ್ತು. ಇದೀಗ ಕಟ್ಟಡ ಸಜ್ಜಾಗಿದ್ದು, ಈ ಸಲ ಒಟ್ಟು 834 ವಿದ್ಯಾರ್ಥಿಗಳಿದ್ದಾರೆ. ಇದೀಗ ಆನ್ ಲೈನ್ ಕ್ಲಾಸ್ ನಡೆಸಲಾಗುತ್ತಿದ್ದು, ಮೊದಲನೇ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 400 ರಷ್ಟಿದೆ. ಅವರೆಲ್ಲ ಈ ಮಾರ್ಚ್ ನಿಂದ ಈ ಕ್ಯಾಂಪಸ್ನಲ್ಲಿಯೇ ಭೌತಿಕ ತರಗತಿಗಳಿಗೆ ಆಗಮಿಸಲಿದ್ದಾರಂತೆ. ಉಳಿದವರ ಕ್ಲಾಸ್ ಏಪ್ರಿಲ್‌ನಿಂದ ಆರಂಭಗೊಳ್ಳಲಿದೆ. 

ಇನ್ನು ಸುಮಾರು 800 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಒಂದೇ ಕ್ಯಾಂಪಸ್ ನಲ್ಲಿ ಕಚೇರಿ, ತರಗತಿ ಹಾಗೂ ಹಾಸ್ಟೆಲ್ ಇರೋದ್ರಿಂದ ತುಂಬಾನೇ ಅನುಕೂಲವಾಗಲಿದೆ. ಅಲ್ಲದೇ ಕಚೇರಿಗೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ನೇಮಕದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನೊಂದೆಡೆ ಈ ಟ್ರಿಪಲ್ ಐಟಿಗೆ ಕಟ್ಟಡ ನಿರ್ಮಾಣಕ್ಕೆ ಮಾತ್ರವೇ ಸರ್ಕಾರ ಅನುದಾನ ನೀಡಿದ್ದು, ಉಳಿದಂತೆ ಮುಂದೆ ಸರ್ಕಾರದಿಂದ ಯಾವುದೇ ಅನುದಾನ ಬರೋದಿಲ್ಲ. ವಿದ್ಯಾರ್ಥಿಗಳು ನೀಡುವ ಶುಲ್ಕದ ಜೊತೆಗೆ ಇವರೇ ವಿವಿಧ ಆವಿಷ್ಕಾರಗಳನ್ನು ಮಾಡಿಕೊಂಡು ಸಂಸ್ಥೆ ನಡೆಸಲು ಅನುದಾನ ಕ್ರೋಢೀಕರಿಸಿಕೊಳ್ಳಬೇಕಿದೆ.