Hijab Verdict: ಹಿಜಾಬ್ ವಿಚಾರಣೆಯ ಹೈಲೈಟ್ಸ್, ಹೀಗಿತ್ತು ವಾದ-ಪ್ರತಿವಾದ

ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿದ್ದ ಹಿಜಾಬ್‌ ಪ್ರಕರಣ ಕುರಿತ ಹೈಕೋರ್ಟ್‌ ಆದೇಶ  ಹೊರಬಿದ್ದಿದೆ. ಹಿಜಾಬ್‌ ಧಾರಣೆ ಇಸ್ಲಾಂ ಧಾರ್ಮಿಕ ಆಚರಣೆಯ ಅತ್ಯವಶ್ಯಕ ಭಾಗವಲ್ಲ ಎಂಬ ಮಹತ್ವದ ವ್ಯಾಖ್ಯಾನ ಮಾಡಿದೆ.

First Published Mar 16, 2022, 3:33 PM IST | Last Updated Mar 16, 2022, 3:33 PM IST

ಬೆಂಗಳೂರು (ಮಾ. 16): ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿದ್ದ ಹಿಜಾಬ್‌ ಪ್ರಕರಣ ಕುರಿತ ಹೈಕೋರ್ಟ್‌ ಆದೇಶ  ಹೊರಬಿದ್ದಿದೆ. ಹಿಜಾಬ್‌ ಧಾರಣೆ ಇಸ್ಲಾಂ ಧಾರ್ಮಿಕ ಆಚರಣೆಯ ಅತ್ಯವಶ್ಯಕ ಭಾಗವಲ್ಲ ಎಂಬ ಮಹತ್ವದ ವ್ಯಾಖ್ಯಾನ ಮಾಡಿದೆ. ಹಿಜಾಬ್‌ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ನಿಷೇಧಿಸುವುದರ ಜತೆಗೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳು ನಿರ್ಧರಿಸಿದ ಸಮವಸ್ತ್ರ ಧರಿಸಬೇಕು. ಸಮವಸ್ತ್ರ ನಿಗದಿ ಮಾಡದ ಶಾಲಾ ಕಾಲೇಜುಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಭಂಗ ಬರದಂತಹ ವಸ್ತ್ರ ಧರಿಸಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶಿಸಿ ಹೊರಡಿಸಿದ್ದ ಆದೇಶವನ್ನು ಊರ್ಜಿತಗೊಳಿಸಿದೆ.

ಶಾಲಾ ಸಮವಸ್ತ್ರ ನಿಗದಿಪಡಿಸುವುದು ಸಾಂವಿಧಾನಿಕವಾಗಿ ಅನುಮತಿಸುವ ಸಮಂಜಸವಾದ ನಿರ್ಬಂಧವಾಗಿದೆ. ಅದನ್ನು ವಿದ್ಯಾರ್ಥಿಗಳು ವಿರೋಧಿಸಲು ಸಾಧ್ಯವಿಲ್ಲ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸತಕ್ಕದ್ದು. ಖಾಸಗಿ ಶಾಲೆಗಳು ತಮ್ಮ ಆಡಳಿತ ಮಂಡಳಿಗಳು ನಿರ್ಧರಿಸುವಂತಹ ಸಮವಸ್ತ್ರವನ್ನೇ ಧರಿಸತಕ್ಕದ್ದು ಎಂದು ನಿರ್ದೇಶಿಸಿ ಆದೇಶ ಹೊರಡಿಸಲು ರಾಜ್ಯ ಸರ್ಕಾರ ಅಧಿಕಾರ ಹೊಂದಿದೆ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ತಿಳಿಸಿದೆ. ಹೈಕೋರ್ಟ್ ತೀರ್ಪಿನ ಸಾರಾಂಶ ಇಲ್ಲಿದೆ. 

 

Video Top Stories