Covid 19: ರೂಲ್ಸ್ ಮಂಗಮಾಯ, ಒಂದೇ ಕ್ಲಾಸ್‌ರೂಂನಲ್ಲಿ 150 ವಿದ್ಯಾರ್ಥಿಗಳಿಗೆ ಪಾಠ

ಧಾರವಾಡ (Dharwad) ಕೋಚಿಂಗ್ ಸೆಂಟರ್‌ಗಳಲ್ಲಿ (Coaching Centre) ಕೊರೊನಾ ರೂಲ್ಸ್‌ ಮಂಗಮಾಯವಾಗಿದೆ. ಒಂದೇ ಕ್ಲಾಸ್‌ರೂಮ್‌ನಲ್ಲಿ 100- 150 ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡಲಾಗುತ್ತಿದೆ. ಕೊರೊನಾ ಸೋಂಕು ಏರಿಕೆಯಾಗುತ್ತಿದ್ದರೂ, ಇಲ್ಲಿ ಯಾವ ಭಯವಿಲ್ಲದೇ ಕ್ಲಾಸ್ ಮಾಡಲಾಗುತ್ತದೆ.

First Published Jan 19, 2022, 3:49 PM IST | Last Updated Jan 19, 2022, 3:49 PM IST

ಧಾರವಾಡ (ಜ. 19): ಇಲ್ಲಿನ ಕೋಚಿಂಗ್ ಸೆಂಟರ್‌ಗಳಲ್ಲಿ (Coaching Centre) ಕೊರೊನಾ ರೂಲ್ಸ್‌ (Corona Rules)  ಮಂಗಮಾಯವಾಗಿದೆ. ಒಂದೇ ಕ್ಲಾಸ್‌ರೂಮ್‌ನಲ್ಲಿ 100- 150 ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡಲಾಗುತ್ತಿದೆ. ಕೊರೊನಾ ಸೋಂಕು ಏರಿಕೆಯಾಗುತ್ತಿದ್ದರೂ, ಇಲ್ಲಿ ಯಾವ ಭಯವಿಲ್ಲದೇ ಕ್ಲಾಸ್ ಮಾಡಲಾಗುತ್ತದೆ. ಅಂತರ ಇಲ್ಲ, ಮಾಸ್ಕ್ ಇಲ್ಲ,ಕೊರೊನಾ ನಿಯಮವನ್ನು ಕೇಳಲೇಬೇಡಿ. 

Weekend Curfew: ಕರ್ಫ್ಯೂ ಮಾಡೋದಾದ್ರೆ ಲಸಿಕೆ ಯಾಕ್ರೀ ಬೇಕು? ಸಿಡಿದ ಪ್ರತಾಪ್ ಸಿಂಹ

 ಶಾಲೆಗಳಲ್ಲಿ ಕೊರೋನಾ ಸ್ಫೋಟ ಮುಂದುವರಿದ್ದು ರಾಜ್ಯಾದ್ಯಂತ ಸೋಮವಾರ ಒಟ್ಟು 1,148 ವಿದ್ಯಾರ್ಥಿಗಳು ಹಾಗೂ 138ಕ್ಕೂ ಹೆಚ್ಚು ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಸನ ಜಿಲ್ಲೆಯೊಂದರಲ್ಲೇ ಬರೋಬ್ಬರಿ 383 ವಿದ್ಯಾರ್ಥಿಗಳಿಗೆ ಪಾಸಿಟಿವ್‌ ಬಂದಿದೆ. ಇನ್ನು ತುಮಕೂರು ಜಿಲ್ಲೆಯಲ್ಲಿ 182 ಮಕ್ಕಳು, 54 ಶಿಕ್ಷಕರಿಗೆ ಕೋವಿಡ್‌ ದೃಢಪಟ್ಟಿದೆ. ಜಿಲ್ಲೆಯ 38 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. 

ಮೈಸೂರಿನಲ್ಲಿ 36 ವಿದ್ಯಾರ್ಥಿಗಳು, 25 ಶಿಕ್ಷಕರು, ಶಿವಮೊಗ್ಗ ಜಿಲ್ಲೆಯಲ್ಲಿ 31 ವಿದ್ಯಾರ್ಥಿಗಳು, 10 ಶಿಕ್ಷಕರು, ಕೋಲಾರ ಜಿಲ್ಲೆಯಲ್ಲಿ 66 ಮಕ್ಕಳು, 15 ಶಿಕ್ಷಕರು, ರಾಯಚೂರು ಜಿಲ್ಲೆಯಲ್ಲಿ 23 ವಿದ್ಯಾರ್ಥಿಗಳು, 6 ಶಿಕ್ಷಕರು ಸೋಂಕಿಗೆ ಒಳಗಾಗಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ 30 ಮಕ್ಕಳಲ್ಲಿ, ಧಾರವಾಡ ಜಿಲ್ಲೆಯಲ್ಲಿ 122 ಮಕ್ಕಳು ಹಾಗೂ 24 ಶಿಕ್ಷಕರಿಗೆ ಪಾಸಿಟಿವ್‌ ಬಂದಿದೆ.