ನಾಳೆ ಪಿಯುಸಿ ಪರೀಕ್ಷೆ ಹಿನ್ನೆಲೆ: ಕಾಂಗ್ರೆಸ್‌ ಬಂದ್‌ ವಾಪಾಸ್

ನಾಳೆ ದ್ವಿತೀಯ ಪಿಯು ಪರೀಕ್ಷೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೋಗುವುದಕ್ಕೆ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಬಂದ್‌ ಅನ್ನು ರದ್ದುಗೊಳಿಸಲಾಗಿದೆ.

First Published Mar 8, 2023, 6:27 PM IST | Last Updated Mar 8, 2023, 6:27 PM IST

ಬೆಂಗಳೂರು (ಮಾ.08): ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರು ಲಂಚ ಪಡೆಯುವಾಗ ಸಿಕ್ಕಿಬಿದ್ದು, ಕೋರ್ಟ್‌ನಿಂದ ಜಾಮೀನು ಪಡೆದು ಅದ್ಧೂರಿ ಮೆರವಣಿಗೆ ಮೂಲಕ ಮನೆಗೆ ಆಗಮಿಸಿದ್ದರು. ಇದನ್ನು ನೋಡಿದ್ದ ಕಾಂಗ್ರೆಸ್‌ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯಾದ್ಯಂತ ನಾಳೆ ಬಂದ್‌ಗೆ ಕರೆ ನೀಡಿತ್ತು. ಆದರೆ, ನಾಳೆ ದ್ವಿತೀಯ ಪಿಯು ಪರೀಕ್ಷೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೋಗುವುದಕ್ಕೆ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಬಂದ್‌ ಅನ್ನು ರದ್ದುಗೊಳಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 

ನಾಳೆ ಶಾಲಾ ಮಕ್ಕಳಿಗೆ ಪಿಯುಸಿ  ಪರೀಕ್ಷೆ ಇದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಕಾಂಗ್ರೆಸ್ ನಾಯಕರಿಗೆ ಪರೀಕ್ಷೆ ವಿಚಾರ ತಿಳಿಸಿದರು.  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇತರೆ ಮುಖಂಡರಾದ ಎಂಬಿ ಪಾಟೀಲ್, ಪರಮೇಶ್ವರ್ ಎಲ್ಲರೂ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿದ್ದರು. ಅಲ್ಲಿ ಚರ್ಚಿಸಿ ಬಂದ್ ಬೇಡ ಅಂತ ತೀರ್ಮಾನ ಮಾಡಿದ್ದಾರೆ. ಪಿಯುಸಿ ಮಕ್ಕಳಿಗೆ ತೊಂದರೆ ಆಗಬಾರದು ಅಂತ ನಾಳಿನ‌ ಬಂದ್ ವಾಪಸ್ ಪಡೆಯಲಾಗಿದೆ. ಇನ್ನು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಸಂಘ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ನ್ಯಾಯಾಂಗದ ಪ್ರಕ್ರಿಯೆ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಸರ್ಕಾರದ ಬೆಂಬಲ ಇಲ್ಲದೆ ಒಂದೇ ದಿನದಲ್ಲಿ ಬೇಲ್ ಸಿಗಲ್ಲ. ವಿರೋಧ ಪಕ್ಷದವರಿಗೆ ಈ‌ ರೀತಿ ಬೇಲ್ ಸಿಗಲ್ಲ. ಮಾಡಾಳ್‌ಗೆ  ಜಾಮೀನು ಸಿಗುವ ವಿಚಾರವಾಗಿ ಸರ್ಕಾರ ಶಾಮೀಲಾಗಿದೆ
ರಾಮಲಿಂಗಾ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.