Transgender Deepu Buddhe Take PhD: ಚಾಮರಾಜನಗರದ ಲಿಂಗತ್ವ ಅಲ್ಪಸಂಖ್ಯಾತೆಗೆ ಪಿಎಚ್‌ಡಿ ಸೀಟು
- ಅಸ್ಪೃಶ್ಯತಾ ಭಾವನೆ ಮೆಟ್ಟಿ ನಿಂತ ಚಾಮರಾಜನಗರದ ದೀಪು ಬುದ್ದೆ
- ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ
- ರಾಜ್ಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ಮೊದಲ ಲಿಂಗತ್ವ ಅಲ್ಪಸಂಖ್ಯಾತೆ
- ಲಿಂಗತ್ವ ಅಲ್ಪಸಂಖ್ಯಾತರ ಜೀವನ-ಹೋರಾಟ ವಿಷಯದಲ್ಲಿ ಅಧ್ಯಯನ
- ದೀಪಾ ಬುದ್ದೆ ಬೆನ್ನುಲುಬಾಗಿ ನಿಂತಿರುವ ಸಮತಾ ಸೊಸೈಟಿ
ಚಾಮರಾಜನಗರ ತಾಲೂಕು ಹೆಗ್ಗವಾಡಿಪುರದ ಗುರುಸ್ವಾಮಿ ಹುಟ್ಟಿನಿಂದ ಗಂಡು. ಆದರೆ ಹದಿಹರೆಯದ ವಯಸ್ಸಿಗೆ ಬರುತ್ತಿದ್ದಂತೆ ದೈಹಿಕ ಬದಲಾವಣೆ ಕಂಡು ಬಂದರೂ ಅದ್ಯಾವುದನ್ನು ತೋರ್ಪಡಿಸಿಕೊಳ್ಳದೆ ಬಿ.ಎ ಪದವಿ ಪೂರ್ಣಗೊಳಿಸಿದರು. ಅದ್ಯಾಕೋ ತಮ್ಮಲ್ಲಾದ ದೈಹಿಕ ಹಾಗು ಮಾನಸಿಕ ಬದಲಾವಣೆಯನ್ನು ಮುಚ್ಚಿಕೊಳ್ಳಬಾರದು ಎಂದು ಕೊಂಡ ಇವರು ತಮ್ಮ ಹೆಸರನ್ನು ದೀಪು ಬುದ್ದೆ ಎಂದು ಬದಲಿಸಿಕೊಂಡಿದ್ದಲ್ಲದೆ, ಯಾವುದೇ ಅಳುಕಿಲ್ಲದೆ ತಾವೊಬ್ಬ ಲಿಂಗತ್ವ ಲೈಂಗಿಕ ಅಲ್ಪಸಂಖ್ಯಾತರೆಂದು ಗುರುತಿಸಿಕೊಂಡವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅರ್ಜಿ ಸಲ್ಲಿಸಿದರು ಲೈಂಗಿಕ ಅಲ್ಪ ಸಂಖ್ಯಾತರಾಗಿದ್ದ ಇವರಿಗೆ ಸೀಟು ಸಿಗದೆ ಮೂರು ವರ್ಷ ಕಾಲ ವಿದ್ಯಾಭ್ಯಾಸ ಮೊಟಕುಗೊಳಿಸಿದರು. ಬಳಿಕ 2018 ರಲ್ಲಿ ಹೋರಾಟ ನಡೆಸಿ ಲಿಂಗತ್ವ ಅಲ್ಪಸಂಖ್ಯಾತ ಕಾಲಂ ಅಡಿಯಲ್ಲೇ ಎಂ.ಎ. ಗೆ ಪ್ರವೇಶಾತಿ ಪಡೆಯುವಲ್ಲಿ ಸಫಲರಾಗಿ, 2020ರಲ್ಲಿ ಸ್ನಾತಕೋತ್ತರ ಪದವಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
GATE Examination 2022: GATE ಪರೀಕ್ಷೆ ಮುಂದೂಡಲು ನಿರಾಕರಿಸಿದ ಸುಪ್ರೀಂ
ಇಷ್ಟೇ ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಎಂ.ಜೆ ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ, ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಜೀವನ ಮತ್ತು ಹೋರಾಟ ಒಂದು ವಿಮರ್ಶಾತ್ಮಕ ಅಧ್ಯಯನ ಎಂಬ ವಿಷಯದಲ್ಲಿ ಪಿಹೆಚ್ ಡಿ ಮಾಡಲು ಮುಂದಾಗಿದ್ದು 2021 ರ ಜನವರಿಯಲ್ಲಿ ನಡೆದ ಪ್ರವೇಶ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ. ಇದರೊಂದಿಗೆ ಇದೇ ರಾಜ್ಯದಲ್ಲೆ ಮೊದಲ ಬಾರಿಗೆ ಪಿಎಚ್.ಡಿ ಅಧ್ಯಯನ ಮಾಡುತ್ತಿರುವ ಲಿಂಗತ್ವ ಲೈಂಗಿಕ ಅಲ್ಪಸಂಖ್ಯಾತೆ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ದೀಪು ಬುದ್ದೆ ಅವರಿಗೆ ಬೆನ್ನುಲುಬಾಗಿ ಲಿಂಗತ್ವ ಲೈಂಗಿಕ ಅಲ್ಪ ಸಂಖ್ಯಾತರ ಏಳಿಗಾಗಿ ದುಡಿಯುತ್ತಿರುವ ಚಾಮರಾಜನಗರದ ಸಮತಾ ಸೊಸೈಟಿ ನಿಂತಿದೆ. ದೀಪು ಬುದ್ದೆ ಅವರ ಸಾಧನೆ ಬಗ್ಗೆ ಸಮತಾ ಸೊಸೈಟಿಯ ಸದಸ್ಯರು ಹೆಮ್ಮೆಪಡುತ್ತಿದ್ದಾರೆ. ಸಮಾಜ ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎನ್ನುವ ದೀಪಾಬುದ್ದೆ ಪಿಎಚ್.ಡಿ. ಪಡೆದ ನಂತರ ತಮ್ಮಂತೆಯೇ ಇರುವ ಲಿಂಗತ್ವ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡಲು ಹಾಗು ಅವರಿಗೆ ಸಮಾಜದಲ್ಲಿ ಇತರರಂತೆ ಸ್ಥಾನಮಾನ ಕಲ್ಪಿಸಿಕೊಡುವ ಗುರಿ ಹೊಂದಿದ್ದಾರೆ.