Bengaluru School Hijab Row: ಹಿಜಾಬ್ ಗಲಾಟೆ ಬಳಿಕ ಚಂದ್ರಾ ಲೇಔಟ್‌ ಶಿಕ್ಷಕಿ ರಾಜೀನಾಮೆ

ಬೆಂಗಳೂರಿನ ಚಂದ್ರಾ ಲೇಔಟ್‌ನ ವಿದ್ಯಾಸಾಗರ್ ಶಾಲೆಯಲ್ಲಿ ಹಿಜಾಬ್ ಗಲಾಟೆ ನಡೆದು ಅಮಾನತುಗೊಂಡಿದ್ದ ಶಿಕ್ಷಕಿ  ಶಶಿಕಲಾ ರಾಜೀನಾಮೆ ನೀಡಿದ್ದು, ಆಡಳಿತ ಮಂಡಳಿಯೇ ಒತ್ತಾಯ ಪೂರ್ವಕವಾಗಿ  ರಾಜೀನಾಮೆಯನ್ನು ಪಡೆಯಿತಾ ಎಂಬ ಅನುಮಾನ ವ್ಯಕ್ತವಾಗಿದೆ.

First Published Feb 14, 2022, 4:35 PM IST | Last Updated Feb 14, 2022, 4:35 PM IST

ಬೆಂಗಳೂರು(ಫೆ.14): ಬೆಂಗಳೂರಿನ ಚಂದ್ರಾ ಲೇಔಟ್‌ನ (Chandra Layout) ವಿದ್ಯಾಸಾಗರ್ ಶಾಲೆಯಲ್ಲಿ (Vidya Sagar Public School) ಹಿಜಾಬ್ (hijab) ಧರಿಸದಂತೆ ಶಿಕ್ಷಕರು ಸೂಚನೆ ನೀಡಿದ್ದಕ್ಕೆ ಪೋಷಕರು ಶಿಕ್ಷಕರ ಜೊತೆ ವಾಗ್ವಾದ ನಡೆದಿತ್ತು.  ಈ ಹಿನ್ನೆಲೆ ವಿವಾದಕ್ಕೆ ಕಾರಣವಾದ ಶಿಕ್ಷಕಿ ಶಶಿಕಲಾ (Shashikala) ಅವರನ್ನು ಶಾಲಾ ಆಡಳಿತ ಮಂಡಳಿ ವಜಾಗೊಳಿಸಿತ್ತು. ಶಶಿಕಲಾ ಮಕ್ಕಳನ್ನು ನಿಂದಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು. ಈ ಸಂಬಂಧ ಕೆಲವು ಸಂಘಟನೆಗಳು ಸಹ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಸದ್ಯ ಹಿಬಾಬ್‌ ವಿವಾದಕ್ಕೆ ಬೇಸತ್ತು ಅನಾರೋಗ್ಯದ ಕಾರಣ ನೀಡಿ ಗಣಿತ ಶಿಕ್ಷಕಿ ಶಶಿಕಲಾ ರಾಜೀನಾಮೆ ನೀಡಿದ್ದಾರೆ.

Nalanda University Past Glory: ಸಾವಿರ ವರ್ಷಗಳ ನಂತರ ಗತವೈಭವಕ್ಕೆ ಮರಳಿದ ನಳಂದಾ ವಿಶ್ವವಿದ್ಯಾಲಯ

ಶಶಿಕಲಾ ಮೂರು ವರ್ಷಗಳಿಂದ  ಈ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಶಾಲೆಯ ಆಡಳಿತ ಮಂಡಳಿಯೇ ಒತ್ತಾಯ ಪೂರ್ವಕವಾಗಿ ಶಶಿಕಲಾ ಅವರ ರಾಜೀನಾಮೆಯನ್ನು ಪಡೆಯಿತಾ ಎಂಬ ಅನುಮಾನ ವ್ಯಕ್ತವಾಗಿದೆ. ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ ತರಗತಿಯಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಬೋರ್ಡ್ ಮೇಲೆ ಬರೆದಿರುವುದೇ ಪೋಷಕರ ಆಕ್ರೋಶಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಶಿಕ್ಷಕಿ ಇದನ್ನು ಅಲ್ಲಗಳೆದಿದ್ದು  ನಾನು ತರಗತಿಯಲ್ಲಿ ಹೆಚ್ಚು ಗಲಾಟೆ ಮಾಡುವ‌ ಮಕ್ಕಳ ಹೆಸರು ಬೋರ್ಡ್ ಮೇಲೆ ಬರೆದಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.