Asianet Suvarna News Asianet Suvarna News

ದೇವಸ್ಥಾನದಲ್ಲಿ ಹೂ ಮಾರುತ್ತಿದ್ದ ಯುವತಿಗೆ ಕಮಿಷನರ್ ಗೌರವ್ ಗುಪ್ತಾ ನೆರವು

Jun 29, 2021, 5:15 PM IST

ಬೆಂಗಳೂರು (ಜೂ. 29): ದೇವಸ್ಥಾನದಲ್ಲಿ ಹೂವು ಮಾರುತ್ತಿದ್ದ ವಿದ್ಯಾರ್ಥಿನಿಗೆ ಬಿಬಿಎಂಪಿ ಕಮಿಷನರ್ ನೆರವು ನೀಡಿದ್ಧಾರೆ. ಕಮಿಷನರ್ ಗೌರವ್ ಗುಪ್ತಾ ನೆರವಿಗೆ ವಿದ್ಯಾರ್ಥಿನಿ ಬನಶಂಕರಿ ಮನದುಂಬಿ ಧನ್ಯವಾದಗಳನ್ನು ಅರ್ಪಿಸಿದ್ದಾಳೆ. 

ಸಿಎಂ ಮಹತ್ವದ ಸಭೆ: ಈ ವಾರವೇ ಅನ್‌ಲಾಕ್‌ 3.0 ಭವಿಷ್ಯ ನಿರ್ಧಾರ

'ನಾನು ಎಸ್‌ಎಸ್‌ಎಲ್‌ಸಿ ಓದ್ತಾ ಇದೀನಿ. ಚೆನ್ನಾಗಿ ಓದಬೇಕೆಂಬ ಆಸೆ ಇದೆ. ಮನೆಯಲ್ಲಿ ಕಷ್ಟ ಇದೆ. ದುಡಿಯುವುದು ಅನಿವಾರ್ಯ. ಹೂವು ಮಾರಿದ ಹಣದಿಂದ ಜೀವನ ನಡೆಸುತ್ತಿದ್ದೇವೆ. ಸಿಕ್ಕ ಸಮಯದಲ್ಲೇ ಓದ್ತಾ ಇದೀನಿ. ನನ್ನ ಶಿಕ್ಷಣಕ್ಕೆ ಕಮಿಷನರ್ ಗೌರವ್ ಗುಪ್ತಾ ನೆರವು ನೀಡುವುದಾಗಿ ಹೇಳಿದ್ಧಾರೆ. ಲ್ಯಾಪ್‌ಟ್ಯಾಪ್ ಕೊಡಿಸುವ ಭರವಸೆ ನೀಡಿದ್ದು ಖುಷಿ ಕೊಟ್ಟಿದೆ' ಎಂದಿದ್ಧಾಳೆ.