Bengaluru University: ವಿವಿ ಆವರಣದೊಳಗೆ ABVP, NSUI ಗೆ ನಿಷೇಧ..?

ಯಾರು ಮೊದಲು ಪ್ರತಿಭಟನೆ ನಡೆಸಬೇಕು ಎಂಬ ವಿಚಾರದ ಬಗ್ಗೆ ABVP VS NSUI ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾತಿನ ಚಕಮಕಿ, ಘರ್ಷಣೆ ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ. 

First Published Feb 2, 2022, 10:17 AM IST | Last Updated Feb 2, 2022, 11:07 AM IST

ಬೆಂಗಳೂರು (ಫೆ. 02): ಯಾರು ಮೊದಲು ಪ್ರತಿಭಟನೆ ನಡೆಸಬೇಕು ಎಂಬ ವಿಚಾರದ ಬಗ್ಗೆ ABVP VS NSUI ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾತಿನ ಚಕಮಕಿ, ಘರ್ಷಣೆ ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ. ಈ ವೇಳೆ ಓರ್ವ ವಿದ್ಯಾರ್ಥಿನಿ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ, ಉಳಿದಂತೆ 10 ಮಂದಿಗೆ ಸಣ್ಣ ಪುಟ್ಟಗಾಯಗಳಾಗಿದೆ.

Dr.Ambedkar Portrait Removal Row: ಜಡ್ಜ್ ವಿರುದ್ಧ ಪ್ರೊಟೆಸ್ಟ್, ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ಘರ್ಷಣೆ

ವಿವಿ ಆವರಣದೊಳಗೆ ರಾಜಕಿಯ ಪ್ರೇರಿತ ಸಂಘಟನೆಗಳ ಕಾರುಬಾರು ಜೋರಾಗಿದ್ದು ವಿದ್ಯಾರ್ಥಿಗಳು ಬೇಸತ್ತಿದ್ದಾರೆ. ಇಂತಹ ಸಂಘಟನೆಗಳನ್ನು ರಾಜಕೀಯದಿಂದ ದೂರವಿಡಲು, ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ರಚನೆಯಾಗಿದೆ. ವಿವಿ ಆವರಣಕ್ಕೆ ABVP, SFI, CFI ಸಂಘಟನೆಗಳ ಪ್ರವೇಶಕ್ಕೆ ನಿಷೇಧ ಹೇರುವಂತೆ ವಿಸಿಗೆ ಮನವಿ ಮಾಡಿದ್ದಾರೆ.