ಶಿಕ್ಷಣಕ್ಕೆ ಒತ್ತು ನೀಡುವ ಶರಣ ಬಸವೇಶ್ವರ ಸಂಸ್ಥಾನಕ್ಕೆ 5 ವರ್ಷದ ಕಿರಿಯ ಪೀಠಾಧಿಪತಿ

ಕಲಬುರಗಿ ಜಿಲ್ಲೆಯ ಹಾರಕೂಡದ ಶರಣ ಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ.ಶರಣ ಬಸವಪ್ಪ ಅಪ್ಪ ಅವರಿಂದ 9ನೇ ಪೀಠಾಧಿಪತಿಯಾಗಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಅಧಿಕಾರ ಸ್ವೀಕರಿಸುವ ಮೂಲಕ 200 ವರ್ಷಗಳ ಹಳೆಯ ಶರಣಬಸವೇಶ್ವರ ಸಂಸ್ಥಾನದಲ್ಲಿ ಹೊಸ ಯುಗ ಆರಂಭವಾಗಿದೆ.

First Published Jun 8, 2022, 7:57 PM IST | Last Updated Jun 8, 2022, 7:57 PM IST

ಕಲಬುರಗಿ (ಜೂ.8): ಕಲಬುರಗಿ ಜಿಲ್ಲೆಯ ಹಾರಕೂಡದ ಶರಣ ಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ.ಶರಣ ಬಸವಪ್ಪ ಅಪ್ಪ ಅವರಿಂದ 9ನೇ ಪೀಠಾಧಿಪತಿಯಾಗಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಅಧಿಕಾರ ಸ್ವೀಕರಿಸುವ ಮೂಲಕ 200 ವರ್ಷಗಳ ಹಳೆಯ ಶರಣಬಸವೇಶ್ವರ ಸಂಸ್ಥಾನದಲ್ಲಿ ಹೊಸ ಯುಗ ಆರಂಭವಾಗಿದೆ.  ನವೆಂಬರ್ 1, 2017ರಂದು ಜನಿಸಿದ 5 ವರ್ಷದ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು ದಾಸೋಹದ ಪರಿಕಲ್ಪನೆ ಪರಿಚಯಿಸಿದ 19ನೇ ಶತಮಾನದ ಸಂತ ಶರಣಬಸವೇಶ್ವರರು 200 ವರ್ಷಗಳ ಹಿಂದೆ ಸ್ಥಾಪಿಸಿದ ಶರಣಬಸವೇಶ್ವರ ಸಂಸ್ಥಾನದ ಎಲ್ಲಾ ಪೀಠಾಧಿಪತಿಗಳಲ್ಲಿ ಕಿರಿಯರಾಗಿದ್ದಾರೆ. 

CHITRADURGA: ಶಾಲೆಯ ಅಭಿವೃದ್ಧಿಗಾಗಿ ಬೀದಿಗಿಳಿದ ಕೋಟೆ ನಾಡಿನ ವಿದ್ಯಾರ್ಥಿಗಳು

7 ನೇ ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಅವರು 1918 ರಲ್ಲಿಯೇ ಸಾರ್ವಜನಿಕ ವಾಚನಾಲಯವನ್ನು ಪ್ರಾರಂಭಿಸಿ ಜನರಲ್ಲಿ ಜಾಗೃತಿ ಮೂಡಿಸಿದವರು ಶಿಕ್ಷಣವೇ ಶಕ್ತಿ ಎಂದು 1938ರಲ್ಲಿ  ತಮ್ಮ ಮಗಳು ಮಹಾದೇವಿಯ  ಹೆಸರಿನಲ್ಲಿ ಶಾಲೆಯನ್ನು ಪ್ರಾರಂಭಿಸಿ ಸ್ತ್ರೀ ಶಿಕ್ಷಣಕ್ಕೆ ಹರಿಕಾರರಾದರು. ನಂತರ 8ನೇ ಪೀಠಾಧಿಪಾತಿಯಾಗಿ ಬಂದ ಪೂಜ್ಯ ಡಾ.ಶರಣ ಬಸವಪ್ಪ ಅಪ್ಪ ಅವರು ಈಗಲೂ ಸಂಸ್ಥಾನವನ್ನು ಮುನ್ನಡೆಸುತ್ತಿದ್ದು, ಇವರ ಆಡಳಿತ ಅವಧಿಯನ್ನು ಸುವರ್ಣ ಯುವ ಎನ್ನಲಾಗುತ್ತಿದೆ. ಶರಣ ಬಸವೇಶ್ವರ ಸಂಸ್ಥಾನವನ್ನು ದೇಶಮಟ್ಟದಲ್ಲಿ ಬೆಳೆಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಅನ್ನ ದಾಸೋಹದ ಜೊತೆಗೆ ಅದರಿಂದ ಹೆಚ್ಚಾಗಿ ಅಕ್ಷರ ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ.