18 ಲಕ್ಷ ವಿದ್ಯಾರ್ಥಿಗಳಿಗೆ ಫಟಾಫಟ್ ಲಸಿಕೆ, ಜುಲೈ 3 ನೇ ವಾರ ಕಾಲೇಜು ಆರಂಭ..?
ಕಾಲೇಜು ಆರಂಭಕ್ಕೂ ಪುನಾರಂಭಕ್ಕೂ ಮುನ್ನ 18 ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಅಭಿಯಾನ ಕೈಗೊಳ್ಳುವ ಬಗ್ಗೆ ಸರ್ಕಾರ ಸಿದ್ಧತೆ ನಡೆಸಿದೆ.
ಬೆಂಗಳೂರು (ಜೂ. 27): ಕಾಲೇಜು ಆರಂಭಕ್ಕೂ ಪುನಾರಂಭಕ್ಕೂ ಮುನ್ನ 18 ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಅಭಿಯಾನ ಕೈಗೊಳ್ಳುವ ಬಗ್ಗೆ ಸರ್ಕಾರ ಸಿದ್ಧತೆ ನಡೆಸಿದೆ.
ಕಾಲೇಜು ವಿದ್ಯಾರ್ಥಿಗಳನ್ನು ಆದ್ಯತಾ ಗುಂಪು ಎಂದು ಪರಿಗಣಿಸಿ, ಎಲ್ಲರಿಗೂ ಒಮ್ಮೆಗೆ ಲಸಿಕೆ ಹಾಕಲು ಜುಲೈ ಮೊದಲ ವಾರದಿಂದ 2 ರಿಂದ 3 ದಿನ ಅಭಿಯಾನ ನಡೆಸುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ಏಕಕಾಲದಲ್ಲಿ ಎಲ್ಲಾ ಕಾಲೇಜುಗಳಲ್ಲೂ ಲಸಿಕೆ ಅಭಿಯಾನ ಆಯೋಜಿಸಲು ನಿರ್ಣಯಿಸಲಾಗಿದೆ.