Operation Ganga: ಆಪರೇಷನ್ ಗಂಗಾ ಅಡಿಯಲ್ಲಿ 13 ಸಾವಿರ ಭಾರತೀಯರು ವಾಪಸ್
ಆಪರೇಷನ್ ಗಂಗಾ ಅಡಿಯಲ್ಲಿ ಸುರಕ್ಷಿತವಾಗಿ ಈವರೆಗೆ 13,000 ಭಾರತೀಯ ನಾಗರಿಕರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ
ನವದೆಹಲಿ: ಉಕ್ರೇನ್ (Ukraine) ಮೇಲೆ ರಷ್ಯಾ (Russia) ಸಮರ ಸಾರಿದ ಬಳಿಕ ಕೇಂದ್ರ ಸರ್ಕಾರ ಉಕ್ರೇನ್ ನಲ್ಲಿನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಆಪರೇಷನ್ ಗಂಗಾ ಅಡಿಯಲ್ಲಿ ಸುರಕ್ಷಿತವಾಗಿ ಕರೆತರುತ್ತಿದೆ. ಇದುವರೆಗೆ ಆಪರೇಷನ್ ಗಂಗಾ (Operation Ganga) ಅಡಿಯಲ್ಲಿ 13,000 ಭಾರತೀಯ ನಾಗರಿಕರನ್ನು (Indian citizens) ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ.
Ukraine Educational Institutions: ರಷ್ಯಾ ದಾಳಿಯಿಂದ ಉಕ್ರೇನ್ ನಲ್ಲಿ 160 ಶಿಕ್ಷಣ ಸಂಸ್ಥೆಗಳು ನಾಶ!
ಕಳೆದ 8 ದಿನಗಳಿಂದ ಆಪರೇಶನ್ ಗಂಗಾ ನಡೆಯುತ್ತಿದ್ದು, ಶನಿವಾರ 15 ವಿಮಾನದಲ್ಲಿ 3 ಸಾವಿರ ಭಾರತೀಯ ನಾಗರಿಕರನ್ನು ಭಾರತಕ್ಕೆ ಕರೆತರಲಾಗಿದೆ. ಇದರಲ್ಲಿ 84 ಮಂದಿ ಕನ್ನಡಿಗರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಮೂಲಕ ಈವರೆಗೆ 366 ಕನ್ನಡಿಗರು ಬಂದಿದ್ದಾರೆ. ಮಾರ್ಚ್ 10ರವೆಗೆ ಈ ಕಾರ್ಯಾಚರಣೆ ನಡೆಯಲಿದೆ. ಯುದ್ಧ ಭೂಮಿಯಿಂದ ತಾಯ್ನಾಡಿಗೆ ಬಂದ ವಿದ್ಯಾರ್ಥಿಗಳೂ ಹೆತ್ತವರನ್ನು ನೋಡಿ ಭಾವುಕರಾದರು. ಇಂದು 11 ವಿಮಾನದ ಮೂಲಕ 2,200 ಜನ ವಾಪಸ್ ಆಗಲಿದ್ದಾರೆ.