Asianet Suvarna News Asianet Suvarna News

ಮಕ್ಕಳ ಶಿಕ್ಷಣಕ್ಕೆ ತೊಂದರೆಯಿಲ್ಲ; ಭರ್ಜರಿ ಪ್ಲಾನ್ ಮಾಡಿದ ರಾಜ್ಯ ಸರ್ಕಾರ..!

ರಾಜ್ಯದ 8, 9 ಮತ್ತು 10 ನೇ ತರಗತಿ ಮಕ್ಕಳಿಗೆ ದೂರದರ್ಶನದ 'ಚಂದನ' ವಾಹಿನಿ ಮೂಲಕ ಬೋಧನೆ ಮಾಡುವ 'ಸೇತುಬಂಧ' ಜು. 20 ರಿಂದ ಪ್ರಸಾರವಾಗಲಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 

ಬೆಂಗಳೂರು (ಜು. 19): ರಾಜ್ಯದ 8, 9 ಮತ್ತು 10 ನೇ ತರಗತಿ ಮಕ್ಕಳಿಗೆ ದೂರದರ್ಶನದ 'ಚಂದನ' ವಾಹಿನಿ ಮೂಲಕ ಬೋಧನೆ ಮಾಡುವ 'ಸೇತುಬಂಧ' ಜು. 20 ರಿಂದ ಪ್ರಸಾರವಾಗಲಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 

ಟಿವಿ ಇಲ್ಲದ ಮಕ್ಕಳು ಟಿವಿ ಇರುವ ಮಕ್ಕಳೊಂದಿಗೆ ಸಂಯೋಜಿಸೇಕು. ಇದಕ್ಕಾಗಿ 20 ಮಕ್ಕಳಿಗೆ ಒಬ್ಬರು ಶಿಕ್ಷಕರಂತೆ ಸಂಯೋಜಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ವಹಿಸಬೇಕು. ಒಂದು ತಿಂಗಳ ಪ್ರಸಾರದ ನಂತರ ಮಕ್ಕಳಿಗೆ ಕಿರು ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. 

'ಚಂದನ'ದಲ್ಲಿ ಹೈಸ್ಕೂಲ್ ಮಕ್ಕಳಿಗೆ ಪಾಠ, ಇಲ್ಲಿದೆ ವೇಳಾಪಟ್ಟಿ!

Video Top Stories