ಚಲಿಸುತ್ತಿರುವ ರೈಲಲ್ಲಿ ಯುವಕನ ಹುಚ್ಚಾಟ: ಬಾಗಿಲಲ್ಲಿ ಜೋಕಾಲಿಯಾಟ

ಹುಬ್ಬಳ್ಳಿ: ಚಲಿಸುತ್ತಿರುವ ರೈಲಿನಲ್ಲಿ ಯುವಕನೋರ್ವ  ಹುಚ್ಚಾಟ ನಡೆಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ರೈಲಿನ ಬಾಗಿಲಿನಲ್ಲಿ ನಿಂತು ವಿಚಿತ್ರವಾಗಿ ಯವಕ ವರ್ತಿಸಿದ್ದಾನೆ. 

First Published Jun 5, 2022, 3:27 PM IST | Last Updated Jun 5, 2022, 3:27 PM IST

ಹುಬ್ಬಳ್ಳಿ: ಚಲಿಸುತ್ತಿರುವ ರೈಲಿನಲ್ಲಿ ಯುವಕನೋರ್ವ  ಹುಚ್ಚಾಟ ನಡೆಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ರೈಲಿನ ಬಾಗಿಲಿನಲ್ಲಿ ನಿಂತು ವಿಚಿತ್ರವಾಗಿ ಯವಕ ವರ್ತಿಸಿದ್ದಾನೆ. ಪ್ರಾಣಾಪಾಯವನ್ನು ಲೆಕ್ಕಿಸದೇ ಈ ಯುವಕ ರೈಲಿನ ಬಾಗಿಲಲ್ಲಿ ನಿಂತು ಜೋಕಾಲಿ ಆಡಿದ್ದಾನೆ. ಅಲ್ಲದೇ ರೈಲು ಚಲಿಸುತ್ತಿದ್ದ ವೇಳೆ ಕೈಗೆ ಸಿಗುತ್ತಿದ್ದ ಗಿಡ ಮರಗಳ ಎಲೆಯನ್ನು ಕಸಿಯುವುದು ಮಾಡಿದ್ದಾನೆ. ರೈಲು ವೇಗವಾಗಿ ಸಾಗುತ್ತಿದ್ದರೂ, ಮಾರ್ಗದ ಮಧ್ಯೆ ಹಲವು ಪ್ರಪಾತಗಳಿದ್ದರೂ ತಲೆಕೆಡಿಸಿಕೊಳ್ಳದ ಈತ ಸುಮಾರು ಹೊತ್ತುಗಳ ಕಾಲ ಹುಚ್ಚಾಟವಾಡಿದ್ದಾನೆ. ಈತನ ಕೃತ್ಯದ ವಿಡಿಯೋವನ್ನು ರೈಲಿನಲ್ಲಿದ್ದ ಬೇರೆ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.

Video Top Stories