ಹನುಮಾನ್ ಜಯಂತಿ ದಿನ ಆಂಜನೇಯನ ಕಣ್ಣೀರು : ವಿಡಿಯೋ ವೈರಲ್

  • ಆಂಜನೇಯ ಸ್ವಾಮಿಯ ಕಲ್ಲಿನ ವಿಗ್ರಹದಿಂದ ಕಣ್ಣೀರು
  • ಆಂಜನೇಯನ ಕಣ್ಣೀರು ವಿಡಿಯೋ ವೈರಲ್!
  • ಹುಬ್ಬಳ್ಳಿ ತಾಲೂಕಿನ ಬುಡರಸಿಂಗೆ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಘಟನೆ
First Published Apr 16, 2022, 8:23 PM IST | Last Updated Apr 16, 2022, 8:23 PM IST

ಹುಬ್ಬಳ್ಳಿ: ಇಂದು ಹನುಮಾನ್ ಜಯಂತಿಯಾಗಿದ್ದು, ಎಲ್ಲೆಡೆ ರಾಮಭಕ್ತ ಹನುಮಾನ್ ಭಕ್ತರು ಆಂಜನೇಯನ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಈ ಮಧ್ಯೆ ಹುಬ್ಬಳ್ಳಿ ತಾಲೂಕಿನ ಬುಡರಸಿಂಗೆ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ವಿಚಿತ್ರವೊಂದು ನಡೆದಿದೆ. ಹನುಮಾನ್ ಜಯಂತಿಯ ದಿನ ಆಂಜನೇಯನ ಪ್ರತಿಮೆಯ ಕಣ್ಣಿನಿಂದ ನೀರು ಸುರಿಯುತ್ತಿದೆ. ಹನುಮಾನ್ ಜಯಂತಿ ಪ್ರಯುಕ್ತ ಪೂಜೆ ಮಾಡುವ ವೇಳೆ‌ ಇದು ಅರ್ಚಕರ ಗಮನಕ್ಕೆ ಬಂದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Video Top Stories