Asianet Suvarna News Asianet Suvarna News

ಗಬ್ಬೆದ್ದ ನೀರಿನಿಂದ ವಕ್ಕರಿಸಿದ ಚರ್ಮ ಕಾಯಿಲೆ; ನಿಗದಿ ಗ್ರಾಮದವರ ಗೋಳು ಕೇಳುವವರ್ಯಾರು?

ಧಾರಾವಾಡದ ನಿಗದಿ ಗ್ರಾಮದ ಗ್ರಾಮಸ್ಥರು ಚರ್ಮ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಗ್ರಾಮದ ಜನರಿಗೆ ನೀರು ಪೂರೈಸುವ ಟ್ಯಾಂಕ್ ಸಂಪೂರ್ಣ ಕಲುಷಿಗೊಂಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಸ್ವಚ್ಛಗೊಳಿಸಿಲ್ಲ. ನೀರು ಕುಡಿದ ಶೇ. 70 ರಷ್ಟು ಗ್ರಾಮಸ್ಥರು ಚರ್ಮಕಾಯಿಲೆಯಿಂದ ಬಳಲುತ್ತಿದ್ದಾರೆ.  
 

ಧಾರಾವಾಡ (ಜ. 21): ಇಲ್ಲಿನ ನಿಗದಿ ಗ್ರಾಮದ ಗ್ರಾಮಸ್ಥರು ಚರ್ಮ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಗ್ರಾಮದ ಜನರಿಗೆ ನೀರು ಪೂರೈಸುವ ಟ್ಯಾಂಕ್ ಸಂಪೂರ್ಣ ಕಲುಷಿಗೊಂಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಸ್ವಚ್ಛಗೊಳಿಸಿಲ್ಲ. ನೀರು ಕುಡಿದ ಶೇ. 70 ರಷ್ಟು ಗ್ರಾಮಸ್ಥರು ಚರ್ಮಕಾಯಿಲೆಯಿಂದ ಬಳಲುತ್ತಿದ್ದಾರೆ.  

ನಕಲಿ ಬೀಜ ಕೊಟ್ಟು ಟೋಪಿ ಹಾಕಿದ ಅಧಿಕಾರಿಗಳು; ರೈತರ ಗೋಳು ಕೇಳೋರ್ಯಾರು?

ಟ್ಯಾಂಕ್ ಕ್ಲೀನಿಂಗ್‌ಗೆಂದು ಹಣವನ್ನು ಎತ್ತಿಟ್ಟರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ನಿಗದಿ ಗ್ರಾಮದ ಗ್ರಾಮಸ್ಥರ ಗೋಳಿಗೆ ಸುವರ್ಣ ನ್ಯೂಸ್ ಬಿಗ್ 3 ಧ್ವನಿಯಾಗಿದೆ. ಏನಂತಾರೆ ಸಂಬಂಧಪಟ್ಟ ಅಧಿಕಾರಿಗಳು? ಇಲ್ಲಿದೆ ಸಂಪೂರ್ಣ ವರದಿ.  

 

Video Top Stories