Asianet Suvarna News Asianet Suvarna News

ಕಂಟ್ರೋಲ್‌ ತಪ್ಪಿ ಟೋಲ್‌ಗೆ ಅಪ್ಪಳಿಸಿದ ಬಸ್:‌ ಟೋಲ್‌ ಸಿಬ್ಬಂದಿ ಜಸ್ಟ್‌ ಮಿಸ್‌

ಟೋಲ್ ಪ್ಲಾಜಾಕ್ಕೆ ಬಸ್ಸೊಂದು ಡಿಕ್ಕಿ ಹೊಡೆದ ಭಯಾನಕ ದೃಶ್ಯದ ವಿಡಿಯೋವೊಂದು ದಾವಣಗೆರೆಯಲ್ಲಿ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

First Published Aug 30, 2022, 5:14 PM IST | Last Updated Aug 30, 2022, 5:14 PM IST

ಅಪಘಾತಗಳ ಹಲವು ಭಯಾನಕ ದೃಶ್ಯಗಳನ್ನು ನೀವು ಈಗಾಗಲೇ ನೋಡಿರಬಹುದು. ಕೆಲವು ಅಪಘಾತಗಳನ್ನು ನೋಡಿದರೆ ಮನೆಯಿಂದ ಹೊರ ಬಂದವರು ಮರಳಿ ಮನೆಗೆ ಹೋಗುತ್ತಾರೆ ಎಂಬ ಯಾವ ಗ್ಯಾರಂಟಿಯೂ ಇರುವುದಿಲ್ಲ. ಅಷ್ಟೊಂದು ಆಘಾತಕಾರಿಯಾಗಿ ನಿರೀಕ್ಷಿಸದ ರೀತಿಯಲ್ಲಿ ಕೆಲವು ಅನಾಹುತಗಳು ನಡೆಯುತ್ತವೆ. ಅದೇ ರೀತಿ ಈಗ ರಾಜ್ಯದ ದಾವಣಗೆರೆಯಲ್ಲಿ ನಡೆದ ಅಪಘಾತವೊಂದರ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಹುಟ್ಟಿಸುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಟೋಲ್‌ ಪ್ಲಾಜಾಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬಸ್‌ನ ಮುಂದಿನ ಗಾಜು ಸಂಪೂರ್ಣ ಮಗುಚಿ ಕೆಳಗೆ ಬಿದ್ದಿದ್ದು ಟೋಲ್ ಪ್ಲಾಜಾ ಕೂಡ ಜಖಂ ಆಗಿದೆ. ಪರಿಣಾಮ ಟೋಲ್ ಪ್ಲಾಜಾದೊಳಗೆ ಇದ್ದ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿದ್ದಾರೆ. ಘಟನೆಯ ವಿಡಿಯೋ ಇಲ್ಲಿದೆ ವೀಕ್ಷಿಸಿ. 
 

Video Top Stories