Asianet Suvarna News Asianet Suvarna News

ಲಾಕ್‌ಡೌನ್ ಉಲ್ಲಂಘಿಸಿ ತಿರುಗಾಟ, ಲಿಫ್ಟ್‌ನಲ್ಲೇ ಉಗುಳಿದ ವಿದೇಶಿಗರ ಮೇಲೆ ಕೇಸ್!

ಕೊರೋನಾ ಸೋಂಕು ಹರದಂತೆ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಆದರೆ ಮಂಗಳೂರಿನಲ್ಲಿ ನೆಲೆಸಿರುವ ವಿದೇಶಿಗರು ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದು ಮಾತ್ರವಲ್ಲ, ಕೆಮ್ಮು, ಜ್ವರದ ನಡುವೆ ಲಿಫ್ಟ್‌ನಲ್ಲಿ ಕಫ ಉಗುಳಿದ ಘಟನೆ ನಡೆದಿದೆ. ವಿಯೆಟ್ನಾಂನ ಐವರು ಪ್ರಜೆಗಳು ಈ ವರ್ತನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದೀಗ ಈ ವಿದೇಶಿಗರ ಮೇಲೆ ಕೊಡಿಯಾಲ್ ಬೈಲ್  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಮಂಗಳೂರು(ಏ.18): ಕೊರೋನಾ ಸೋಂಕು ಹರದಂತೆ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಆದರೆ ಮಂಗಳೂರಿನಲ್ಲಿ ನೆಲೆಸಿರುವ ವಿದೇಶಿಗರು ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದು ಮಾತ್ರವಲ್ಲ, ಕೆಮ್ಮು, ಜ್ವರದ ನಡುವೆ ಲಿಫ್ಟ್‌ನಲ್ಲಿ ಕಫ ಉಗುಳಿದ ಘಟನೆ ನಡೆದಿದೆ. ವಿಯೆಟ್ನಾಂನ ಐವರು ಪ್ರಜೆಗಳು ಈ ವರ್ತನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದೀಗ ಈ ವಿದೇಶಿಗರ ಮೇಲೆ ಕೊಡಿಯಾಲ್ ಬೈಲ್  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈ ಐವರು ವಿಯೆಟ್ನಾಂ ಪ್ರಜೆಗಳು ಕೊಡಿಯಾಲ್ ಬೈಲ್‌ ಬಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ತಂಗಿದ್ದಾರೆ. ಎಪ್ರಿಲ್ 4 ರಂದು ವಿದೇಶದಿಂದ ಆಗಮಿಸಿದ ಇವರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಆದರೆ ಈ ಐವರು ಅಪಾರ್ಟ್‌ಮೆಂಟ್ ಹೊರಭಾಗದಲ್ಲಿ ತಿರುಗಾಡುತ್ತಿರುವುದನ್ನು ಅಪಾರ್ಟ್‌ಮೆಂಟ್ ನಿವಾಸಿಗಳು ಗುರುತಿಸಿದ್ದಾರೆ.

ಬಳಿಕ ಇವರ ಚಲನವಲನಗಳ ಬಗ್ಗೆ ಅನುಮಾನ ಮೂಡಿದೆ. ಹೀಗಾಗಿ ಏಪ್ರಿಲ್ 17 ರಂದು ಸಿಸಿಟಿವಿ ಪರೀಶೀಲಿಸಿದ್ದಾರೆ. ಈ ವೇಳೆ ಇವರು ಲಿಫ್ಟ್‌ನಲ್ಲಿ ಕೆಮ್ಮುತ್ತಿರುವುದು ಹಾಗೂ ಕಫ ಉಗುಳುತ್ತಿರುವ ದೃಶ್ಯ ಕಂಡುಬಂದಿದೆ. ಹೀಗಾಗಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ವೈದ್ಯರ ತಂಡದ ಜೊತೆ ಆಗಮಿಸಿ ಇವರನ್ನು ಪರಿಶೀಲಿಸಿ ತಕ್ಷಣವೇ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಷ್ಟೇ ಅಲ್ಲ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Video Top Stories