Asianet Suvarna News Asianet Suvarna News

ದೇವಸ್ಥಾನದ ಅಂಗಳದಲ್ಲಿ ಅಸಭ್ಯ ಟಿಕ್‌ಟಾಕ್ ವಿಡಿಯೋ!

ಮಂಗಳೂರು ಹೊರವಲಯದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಚಿತ್ರೀಕರಿಸಿದ ಅಸಭ್ಯ ಟಿಕ್‌ಟಾಕ್ ವಿಡಿಯೋ ಸದ್ಯ ಭಾರೀ ಟೀಕೆಗೊಳಗಾಗಿದೆ. ಮುಲ್ಕಿಯ ಪ್ರತೀಕ್ ಶೆಟ್ಟಿ ಎಂಬಾತ ಇಬ್ಬರು ಹುಡುಗಿಯರ ಜೊತೆ ಟಿಕ್‌ಟಾಕ್ ಮಾಡಿದ್ದು, ಅಸಭ್ಯ ರೀತಿಯಲ್ಲಿ ವೀಡಿಯೋ ಮಾಡಿರುವುದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. 

ಬೆಂಗಳೂರು(ಆ.28): ಮಂಗಳೂರು ಹೊರವಲಯದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಚಿತ್ರೀಕರಿಸಿದ ಅಸಭ್ಯ ಟಿಕ್‌ಟಾಕ್ ವಿಡಿಯೋ ಸದ್ಯ ಭಾರೀ ಟೀಕೆಗೊಳಗಾಗಿದೆ. ಮುಲ್ಕಿಯ ಪ್ರತೀಕ್ ಶೆಟ್ಟಿ ಎಂಬಾತ ಇಬ್ಬರು ಹುಡುಗಿಯರ ಜೊತೆ ಟಿಕ್‌ಟಾಕ್ ಮಾಡಿದ್ದು, ಅಸಭ್ಯ ರೀತಿಯಲ್ಲಿ ವೀಡಿಯೋ ಮಾಡಿರುವುದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. 

ಇಂತಹ ವರ್ತನೆ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಎಂದು ದೇವಳದ ಭಕ್ತರ ಮತ್ತು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ಮುಲ್ಕಿ ಠಾಣೆಗೆ ದೂರು ನೀಡಿದೆ. ಇದರಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವವರು ಕ್ಷಮೆಯಾಚಿಸಲು ಆಗ್ರಹಿಸಲಾಗಿದೆ. ಕ್ಷಮೆಯಾಚಿಸದೇ ಇದ್ರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವ ಎಚ್ಚರಿಕೆಯನ್ನೂ ನಿಡಲಾಗಿದೆ. 

Video Top Stories