ಬಟ್ಟೆ ನುಂಗಿದ ನಾಗರ ಹಾವು : ಹೊರತೆಗೆದ ಸ್ನೇಕ್ ಅಶೋಕ್

ಬಟ್ಟೆಯೊಂದನ್ನು ನಾಗರಹಾವು ನುಂಗಿದ್ದು ನಂತರ ಸ್ನೇಕ್ ಅಶೋಕ್ ಅವರು ಬಟ್ಟೆಯನ್ನು ಹೊರತೆಗೆದು ಕಾಡಿಗೆ ಬಿಟ್ಟ ವಿಚಿತ್ರ ಘಟನೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದೆ.

First Published Jun 27, 2022, 4:04 PM IST | Last Updated Jun 27, 2022, 4:04 PM IST

ಬೆಳ್ತಂಗಡಿ : ಬಟ್ಟೆಯೊಂದನ್ನು ನಾಗರಹಾವು ನುಂಗಿದ್ದು ನಂತರ ಸ್ನೇಕ್ ಅಶೋಕ್ ಅವರು ಬಟ್ಟೆಯನ್ನು ಹೊರತೆಗೆದು ಕಾಡಿಗೆ ಬಿಟ್ಟ ವಿಚಿತ್ರ ಘಟನೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಶಾಲೆತಡ್ಕ ನಿವಾಸಿ ಅಶೋಕ್‌ ಪೂಜಾರಿ ಎಂಬವರ ಮನೆಯ ಕೊಟ್ಟಿಗೆಯ ಬದಿಯಲ್ಲಿ ಸುಮಾರು 4 ಅಡಿ ಉದ್ದದ ನಾಗರ ಹಾವು ಬಟ್ಟೆಯೊಂದನ್ನು ನುಂಗಿದೆ. ಇದನ್ನು ಗಮನಿಸಿದ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಇವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಬಂದ ಅವರು ನಾಗರಹಾವನ್ನು ಹಿಡಿದು ಅದು ನುಂಗಿದ್ದ ಬಟ್ಟೆಯನ್ನು ಹೊರತೆಗೆದು ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ‌.