Today Panchanga : ಇಂದು ಭರಣಿ ನಕ್ಷತ್ರ... ಮೃತ್ಯುಂಜಯ ಆರಾಧನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Aug 9, 2023, 9:37 AM IST | Last Updated Aug 9, 2023, 9:37 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಬುಧವಾರ, ಅಷ್ಟಮಿ ತಿಥಿ,  ಭರಣಿ ನಕ್ಷತ್ರ. ಇಂದು ಅಷ್ಟಮಿ ತಿಥಿ ಭರಣಿ ನಕ್ಷತ್ರ ಇರುವುದರಿಂದ ಮೃತ್ಯುಂಜಯ ಆರಾಧನೆ ಮಾಡುವುದು ಒಳ್ಳೆಯದು. ಭರಣಿ ನಕ್ಷತ್ರ ಯಮನ ನಕ್ಷತ್ರ ಈ ನಕ್ಷತ್ರದಲ್ಲಿ ಹುಟ್ಟಿದರೆ ಭಯ ಇರುತ್ತದೆ.ಭರಣಿ ನಕ್ಷತ್ರ  ಉಗ್ರವಾದ ನಕ್ಷತ್ರ ಇಂತಹ ಒಂದು ದಿನ ಬಂದಾಗ ಸಾಮಾನ್ಯವಾಗಿ ಅಳುಕು ಉಂಟಾಗುತ್ತದೆ. ಹೀಗಾಗಿ ಭಯ ನಿವಾರಣೆ ಯಾಗಬೇಕು ಅದಕ್ಕೆ  ಮೃತ್ಯುಂಜಯ ಆರಾಧನೆ ಮಾಡಬೇಕು