ಇಂದು ಅಧಿಕ ಮಾಸದ ಅಮಾವಾಸ್ಯೆ ...ದಾನ ಮಾಡಿದರೆ ಒಳ್ಳೆಯದು

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Aug 16, 2023, 10:36 AM IST | Last Updated Aug 16, 2023, 10:36 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಅಮವಾಸ್ಯೆ ತಿಥಿ, ಆಶ್ಲೇಷ ನಕ್ಷತ್ರ. ಅಧಿಕ ಮಾಸದ ಅಮಾವಾಸ್ಯೆ  ಅತ್ಯಂತ ಪರಮ ಶ್ರೇಷ್ಠವಾದದ್ದು. ಇಂದು ದಾನ ಮಾಡಲು ತುಂಬಾ ಒಳ್ಳೆಯ ದಿನ, ದಾನ ಇನ್ನೊಬ್ಬರಿಗೆ ಉಪಯೋಗವಾಗುವಂತದ್ದನ್ನು ಮಾಡಿ  ಈ ದಿನ ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಸ್ವಲ್ಪ ಕಿರಿಕಿರಿ ಇದ್ದು, ಹಣಕಾಸಿನ ಅನುಕೂಲವಿದೆ.