ಯೂಟ್ಯೂಬ್ ನೋಡಿ ಮಾಟ-ಮಂತ್ರ ಕಲಿತ್ರು, 50 ಕೋಟಿಗಾಗಿ ಗೆಳೆಯನ ರುಂಡವನ್ನೇ ಕತ್ತರಿಸಿದ ಪಾಪಿಗಳು!
50 ಕೋಟಿ ರೂಪಾಯಿ ಸಂಪಾದಿಸುವ ಆಸೆಗೆ ಬಿದ್ದು ಸ್ನೇಹಿತನ ತಲೆಯನ್ನೇ ಕತ್ತರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯೂಟ್ಯೂಬ್‌ನಲ್ಲಿ ಮಂತ್ರವಾದಿಯ ವೀಡಿಯೊ ನೋಡಿ ಪ್ರಭಾವಿತರಾದ ಇಬ್ಬರು ಯುವಕರು, ಮನುಷ್ಯನ ತಲೆಬುರುಡೆಯಿಂದ ಪೂಜೆ ಮಾಡಿದರೆ ಹಣ ಸಿಗುತ್ತದೆ ಎಂಬ ಮೂಢನಂಬಿಕೆಗೆ ಬಲಿಯಾಗಿ ಈ ಕೃತ್ಯ ಎಸಗಿದ್ದಾರೆ. ಸಾಮಾಜಿಕ ಜಾಲತಾಣಗಳ ದುರ್ಬಳಕೆ ಯುವಜನರ ಮೇಲೆ ಬೀರುವ ದುಷ್ಪರಿಣಾಮಗಳಿಗೆ ಈ ಘಟನೆ ಒಂದು ನಿದರ್ಶನ.
ಉತ್ತರ ಪ್ರದೇಶದಲ್ಲೊಂದು ಭಯಾನಕ ಕ್ರೈಂ ತಡವಾಗಿ ಬೆಳಕಿಗೆ ಬಂದಿದೆ. 50 ಕೋಟಿ ದುಡ್ಡಿನಾಸೆಗಾಗಿ ಸ್ನೇಹಿತನ ತಲೆಯನ್ನೇ ಕತ್ತರಿಸಿದ್ದರು ಪಾಪಿಗಳು. ಅದ್ಯಾರೋ ಫೇಕ್ ವಾಮಾಚಾರಿ ಹಿಂದೆ ಬಿದ್ದು ದುಡ್ಡಿಗಾಗಿ ಗೆಳೆಯನ ರುಂಡವನ್ನ ಇಟ್ಟು ಪೂಜೆ ಮಾಡಿದ್ರು. ಇದು ಯೂಟ್ಯೂಬ್ ಫೇಕ್ ಮಂತ್ರವಾದಿಯ ಹಾರರ್ ಸ್ಟೋರಿ.
ಮನುಷ್ಯನ ತಲೆಬುರುಡೆಯನ್ನಿಟ್ಟು ಪೂಜೆ ಮಾಡಿದ್ರೆ ಕೆಲವೇ ತಿಂಗಳಿನಲ್ಲಿ 50 ಕೋಟಿ ರೂಪಾಯಿ ಸಂಪಾದನೆ ಮಾಡ್ತೀರಿ ಅನ್ನೋದನ್ನು ಪಂಜಕ್ ಮತ್ತು ಪವನ್ ಯೂಟ್ಯೂಬ್ ನೋಡಿ ತಿಳಿದುಕೊಂಡಿದ್ದರಂತೆ. ಹೀಗಾಗಿ ರಾಜ್ಕುಮಾರ್ ತಲೆಬುರುಡೆಯನ್ನಿಟ್ಟು ವಿಶೇಷ ಪೂಜೆ ಮಾಡಿದ್ದರು ಪಾಪಿಗಳು.
ಈಗಂತೂ ಹೆಚ್ಚಿನ ಯುವಕರು ಸೋಶಿಯಲ್ ಮೀಡಿಯಾಗಳನ್ನು ಬೆನ್ನಿಗೆ ಬೇತಾಳನಂತೆ ಏರಿಸಿಕೊಂಡು ಓಡಾಡ್ತಾರೆ. ಕೆಲವರಂತೂ ದಿನದ ಹೆಚ್ಚಿನ ಸಮಯದಲ್ಲಿ ಸೋಶಿಯಲ್ ಮೀಡಿಯಾಗಳಲ್ಲೇ ಮುಳುಗಿರ್ತಾರೆ. ಅಂತವರಿಗೆ ಉತ್ತರ ಪ್ರದೇಶದ ಈ ಸ್ಟೋರಿ ಎಚ್ಚರಿಕೆಯ ಗಂಟೆ ಇದ್ದಂತೆ.
ಸೋಶಿಯಲ್ ಮೀಡಿಯಾವನ್ನು ತಪ್ಪು ದಾರಿಯಲ್ಲಿ ಬಳಕೆ ಮಾಡಿಕೊಂಡು, ದುಡ್ಡು ಮಾಡಬೇಕು ಅನ್ನೋ ಹುಚ್ಚುತನಕ್ಕೆ ಬಿದ್ದು, ಯೂಟ್ಯೂಬ್ನಲ್ಲಿ ಬ್ಲ್ಯಾಕ್ ಮಾಜಿಕ್ ಕಲಿತು. ಒಂದು ಮಂತ್ರ ಪಠಣ ಕಲಿತು ಮನುಷ್ಯನ ರುಂಡ ಪೂಜೆ ಮಾಡಿದ್ರೆ ಕೋಟ್ಯಧಿಪತಿ ಆಗುತ್ತೇವೆ ಅನ್ನೋ ಮೌಢ್ಯಕ್ಕೆ ಒಳಗಾಗಿದ್ದ ಪಂಕಜ್ ಮತ್ತು ಪವನ್ ಒಬ್ಬ ಅಮಾಯಕನ ಸಾವಿಗೆ ಕಾರಣವಾಗಿದ್ದಾರೆ. ಅವರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ.